ಹಿಂದಿನ ಸಿಮಿ ಸಂಘಟನೆಯೇ ಈಗ ಪಿ ಎಫ್ ಐ ಆಗಿ ಪರಿವರ್ತನೆಯಾಗಿದೆ, ಅದನ್ನು ಕೂಡಲೇ ಬ್ಯಾನ್ ಮಾಡಬೇಕು: ಬಸನಗೌಡ ಪಾಟೀಲ ಯತ್ನಾಳ್
ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವರು ಆದಷ್ಟು ಬೇಗ ಪಿಎಫ್ಐ ಮತ್ತು ಎಸ್ ಡಿ ಪಿ ಐ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಆಗ್ರಹವನ್ನು ಯತ್ನಾಳ್ ಮಾಡಿದರು.
ವಿಜಯಪುರ: ಹಿಂದೆ ಅಸ್ತಿತ್ವದಲ್ಲಿದ್ದ ಸಿಮಿ (SIMI) ಸಂಘಟನೆಯೇ ಹುಟ್ಟಿದ್ದೇ ವಿಜಯಪುರದಲ್ಲಿ, ಈಗ ಅದು ಪಿ ಎಫ್ ಐ (PFI) ಆಗಿ ಪರಿವರ್ತನೆಗೊಂಡು ದೇಶದಾದ್ಯಂತ ಹಬ್ಬಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಂಗಳವಾರ ಹೇಳಿದರು. ತಮ್ಮ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ದೇಶದೆಲ್ಲೆಡೆ ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆದಿದೆ ಮತ್ತು ಅನೇಕರನ್ನು ಬಂಧಿಸಲಾಗಿದೆ ಎಂದರು. ಪ್ರಧಾನಿ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಗೃಹ ಸಚಿವರು ಆದಷ್ಟು ಬೇಗ ಪಿಎಫ್ಐ ಮತ್ತು ಎಸ್ ಡಿ ಪಿ ಐ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಆಗ್ರಹವನ್ನು ಯತ್ನಾಳ್ ಮಾಡಿದರು.
Latest Videos