Karnataka Assembly Polls 2023; ಕರ್ನಾಟಕವಷ್ಟೇ ಅಲ್ಲ, ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಹೆಚ್ ವಿಶ್ವನಾಥ್

Karnataka Assembly Polls 2023; ಕರ್ನಾಟಕವಷ್ಟೇ ಅಲ್ಲ, ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಹೆಚ್ ವಿಶ್ವನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 10, 2023 | 12:46 PM

ಬಿಜೆಪಿ ನಾಯಕರು ಏನೇನು ಹೇಳುತ್ತಿದ್ದಾರೋ ಅದೆಲ್ಲವನ್ನು ಜಗಜ್ಯೋತಿ ಬಸವಶ್ವರ, ಕನಕದಾಸರು, ನಾರಾಯಣ ಗುರು, ಪೆರಿಯಾರ್ ಮೊದಲಾದ ದಾರ್ಶನಿಕರು ಈ ಹಿಂದೆಯೇ ಸಾರಿಹೋಗಿದ್ದಾರೆ ಎಂದು ವಿಶ್ವನಾಥ್ ಹೇಳಿದರು.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಬರಲಿ ಅಥವಾ ಅಮಿತ್ ಶಾ (Amit Shah); ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಅಂತ ಇತ್ತೀಚಿಗಷ್ಟೇ ಪಕ್ಷದಿಂದ ಹೊರಬಿದ್ದಿರುವ ಹೆಚ್ ವಿಶ್ವನಾಥ್ (H Vishwanath) ಹೇಳಿದರು. ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಶ್ವನಾಥ್, ಕೇವಲ ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಾರದು ಎಂದು ಹೇಳಿದರು. ಬಿಜೆಪಿ ನಾಯಕರು ಏನೇನು ಹೇಳುತ್ತಿದ್ದಾರೋ ಅದೆಲ್ಲವನ್ನು ಜಗಜ್ಯೋತಿ ಬಸವಶ್ವರ, ಕನಕದಾಸರು, ನಾರಾಯಣ ಗುರು, ಪೆರಿಯಾರ್ ಮೊದಲಾದ ದಾರ್ಶನಿಕರು ಈ ಹಿಂದೆಯೇ ಸಾರಿಹೋಗಿದ್ದಾರೆ ಎಂದು ವಿಶ್ವನಾಥ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ