ಪ್ರತಾಪ್ ಸಿಂಹ ಒಬ್ಬ ಪುಟ್ಗೋಸಿ, ನನ್ನ ಪ್ರಶ್ನೆ ಮಾಡಲು ಅವನ್ಯಾರು? ಹೆಚ್ ವಿಶ್ವನಾಥ್, ಬಿಜೆಪಿ ವಿಧಾನ ಪರಿಷತ್ ಸದಸ್ಯ
ಮೊದಲು ಹಿರಿಯ ನಾಯಕ ವಿ ಶ್ರೀನಿವಾಸ ಪ್ರಸಾದ್ ಅವರನ್ನು ಟಾರ್ಗೆಟ್ ಮಾಡಿದರು. ಈಗ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲೆ ಹರಿಹಾಯ್ದಿದ್ದಾರೆ.
ಮೈಸೂರು: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ (H Vishwanath) ಅವರು ಸ್ವಪಕ್ಷದ ನಾಯಕರ ವಿರುದ್ಧ ವಾಗ್ದಾಳಿಗಳನ್ನು ನಡೆಸುವ ಮೂಲಕ ಪಕ್ಷ ಮತ್ತು ಅದರ ವರಿಷ್ಠರನ್ನು ಮುಜುಗುರಕ್ಕೆ ಸಿಕ್ಕಿಸುವುದನ್ನು ಮುಂದುವರಿಸಿದ್ದಾರೆ. ಮೊದಲು ಹಿರಿಯ ನಾಯಕ ವಿ ಶ್ರೀನಿವಾಸ ಪ್ರಸಾದ್ (V Srinivas Prasad) ಅವರನ್ನು ಟಾರ್ಗೆಟ್ ಮಾಡಿದರು. ಈಗ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಮೇಲೆ ಹರಿಹಾಯ್ದಿದ್ದಾರೆ. ಯಾರೀ ಅವನು ಪ್ರತಾಪ್ ಸಿಂಹ? ನನ್ನನ್ನು ಕೇಳೋದಿಕ್ಕೆ ಅವನಾರು? ಪುಟಗೋಸಿ ಅವನು! ಪಕ್ಷದ ರಾಜ್ಯಾಧ್ಯಕ್ಷರು ನನ್ನ ಪ್ರಶ್ನೆ ಮಾಡುತ್ತಾರೆ. ಬೇರೆಯವರ ಮಾಡಿದ್ದನ್ನು ನಾನು ಮಾಡಿದ್ದು ಅಂತ ಹೇಳುವ ಪ್ರತಾಪ ಸಿಂಹ ಒಬ್ಬ ನಾಯಕನೇ? ಅಂತ ವಿಶ್ವನಾಥ್ ಜರಿದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Dec 17, 2022 06:06 PM
Latest Videos