Loading video

DKS Vs HDK; ಕುಮಾರಸ್ವಾಮಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ: ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿಗಳು

|

Updated on: May 26, 2023 | 3:48 PM

ಹಿಂದೆ ರಾಷ್ಟ್ರಪತಿಗಳ ಚುನಾವಣೆ ನಡೆದಾಗ ಅವರ ಜೆಡಿಎಸ್ ಪಕ್ಷ ಮತದಾನವನ್ನು ಬಹಿಷ್ಕರಿಸಿತ್ತು ಎಂದು ಶಿವಕುಮಾರ್ ಹೇಳಿದರು.

ದೆಹಲಿ: ಇತ್ತ ಬೆಂಗಳೂರಲ್ಲಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಪದೇಪದೆ ಟೀಕಿಸುತ್ತಿದ್ದರೆ, ದೆಹಲಿಯಲ್ಲಿ ಉಪ ಮುಖ್ಯಮಂತ್ರಿಗಳು ಇಂಗ್ಲಿಷ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಹೇಳುತ್ತಿರುವುದಕ್ಕೆ ತಾನು ಕಾಮೆಂಟ್ ಮಾಡಲಿಚ್ಛಿಸುವುದಿಲ್ಲ ಎಂದು ಹೇಳುವ ಶಿವಕುಮಾರ್, ರಾಷ್ಟ್ರಪತಿಗಳ ಚುನಾವಣೆ ನಡೆದಾಗ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಳಿಳಿಸಿದ್ದ ಬಗ್ಗೆ ಕುಮಾರಸ್ವಾಮಿ ಮಾಡಿರುವ ಟೀಕೆಗೆ, ಅವರು ಒಂದು ಸಂಗತಿಯನ್ನು ಮರೆತಂತಿದೆ, ಹಿಂದೆ ರಾಷ್ಟ್ರಪತಿಗಳ ಚುನಾವಣೆ ನಡೆದಾಗ ಅವರ ಜೆಡಿಎಸ್ ಪಕ್ಷ ಮತದಾನವನ್ನು ಬಹಿಷ್ಕರಿಸಿತ್ತು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ