Hassan: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ತೊಂದರೆಗೀಡಾದವರಿಗೆ ಸಾಂತ್ವನ ಹೇಳಿದ ಶಾಸಕ ಸ್ವರೂಪ್ ಪ್ರಕಾಶ್
ಪ್ರಬಲ ಎದುರಾಳಿ ಪ್ರೀತಂ ಗೌಡರನ್ನುಸೋಲಿಸಿ ಅಸೆಂಬ್ಲಿಗೆ ಆಯ್ಕೆಯಾಗಿರುವ ಸ್ವರೂಪ್ ಹೀಗೆ ಜನರ ಕಷ್ಟಗಳಿಗೆ ಸ್ಪಂದಿಸಿದರೆ ಉತ್ತಮ ನಾಯಕನಾಗಿ ಗುರುತಿಸಿಕೊಳ್ಳುತ್ತಾರೆ.
ಹಾಸನ: ಕ್ಷೇತ್ರದ ಹೊಸ ಶಾಸಕ ಜೆಡಿಎಸ್ ಪಕ್ಷದ ಸ್ವರೂಪ್ ಪ್ರಕಾಶ್ (Swaroop Prakash) ಕೆಲಸ ಶುರುವಿಟ್ಟುಕೊಂಡಿದ್ದಾರೆ. ನಗರದ ಹೊರವಲಯದ ದೇವೇಗೌಡ ನಗರ, ಕೃಷ್ಣಾನಗರ ಏರಿಯಾಳಲ್ಲಿ ಭಾರಿ ಮಳೆಯಿಂದಾಗಿ ಹಲವು ಮನೆಗಳು ಕುಸಿದ್ದಿದ್ದರೆ ಕೆಲ ಮನೆಗಳ ಛಾವಣಿಗಳು ಹಾರಿ ಹೋಗಿವೆ. ಸ್ವರೂಪ್, ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ನಡೆಸಿ ತೊಂದರೆಗೊಳಗಾದವರ ಸಮ್ಮುಖದಲ್ಲೇ ಎಷ್ಟೆಷ್ಟು ಪರಿಹಾರ (compensation) ಸಿಗಬಹುದೆಂದು ಕೇಳಿದರು. ಮನೆ ಕಳೆದುಕೊಂಡವರಿಗೆ ಸಾಂತ್ವನ ಹೇಳುವ ಕೆಲಸವನ್ನು ಸಹ ಶಾಸಕರು ಮಾಡಿದರು. ಭವಾನಿ ರೇವಣ್ಣ (Bhavani Revanna) ಅವರ ನೆರವಿನಿಂದ ಪ್ರಬಲ ಎದುರಾಳಿ ಪ್ರೀತಂ ಗೌಡರನ್ನು (Preetham Gowda) ಸೋಲಿಸಿ ಅಸೆಂಬ್ಲಿಗೆ ಆಯ್ಕೆಯಾಗಿರುವ ಸ್ವರೂಪ್ ಹೀಗೆ ಜನರ ಕಷ್ಟಗಳಿಗೆ ಸ್ಪಂದಿಸಿದರೆ ಉತ್ತಮ ನಾಯಕನಾಗಿ ಗುರುತಿಸಿಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos