Hassan Election Results: ಹಾಸನ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಜೆಡಿಎಸ್ನ ಸ್ವರೂಪ್ಗೆ ಜಯ; ಬಿಜೆಪಿಯ ಪ್ರೀತಂ ಗೌಡಗೆ ಸೋಲಿನ ಶಾಕ್
Hassan Assembly Election Result 2023 Live Counting Updates: ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ವಿರುದ್ಧ ಜೆಡಿಎಸ್ನ ಎಚ್.ಎ. ಸ್ವರೂಪ್ ಗೆಲುವು ಸಾಧಿಸಿದ್ದಾರೆ.
Hassan Assembly Election Result 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 13, ಇಂದು ಪ್ರಕಟವಾಗುತ್ತಿದೆ. ಇದೇ ವೇಳೆ ಹಾಸನದಲ್ಲಿ ಶಾಸಕ ಹಾಗು ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡಗೆ ಸೋಲಿನ ಶಾಕ್ ಸಿಕ್ಕಿದೆ. ಜೆಡಿಎಸ್ ಅಭ್ಯರ್ಥಿ ಎಚ್.ಪಿ. ಸ್ವರೂಪ್ ಗೆಲುವಿನ ನಗೆ ಬೀರಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಂಗಸ್ವಾಮಿ ಇದ್ದರಾದರೂ ಬಿಜೆಪಿ ವರ್ಸಸ್ ಜೆಡಿಎಸ್ ನೇರ ಫೈಟ್ ನಡೆದಿತ್ತು. ಆದರೆ ಅಂತಿಮವಾಗಿ ಜೆಡಿಎಸ್ ಈ ಕ್ಷೇತ್ರ ಜಯಿಸುವಲ್ಲಿ ಯಶಸ್ವಿಯಾಗಿದೆ.
2023 ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನವಾಗಿತ್ತು. ಭವಾನಿ ರೇವಣ್ಣರ ವಿಚಾರಕ್ಕೆ ಇಡೀ ದೇಶದ ಗಮನ ಸೆಳೆದಿರುವ ಹಾಸನ ಜಿಲ್ಲೆಯ ಹಾಸನ ವಿಧಾನಸಭಾ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಹಲವು ತೊಡಕುಗಳ ಮಧ್ಯೆ ಜೆಡಿಎಸ್ ಅಭ್ಯರ್ಥಿ ಎಚ್.ಪಿ. ಸ್ವರೂಪ್ ದಡ ಸೇರಬಲ್ಲರೇ, ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ತಮ್ಮ ಕ್ಷೇತ್ರ ಉಳಿಸಿಕೊಳ್ಳಬಲ್ಲರೇ, ಕಾಂಗ್ರೆಸ್ ಪಕ್ಷ ಈ ಕ್ಷೇತ್ರದಲ್ಲಿ ಮೂರನೇ ಸ್ಥಾನದಿಂದ ಪುಟಿದೇಳಬಲ್ಲುದೇ? ಇವೆಲ್ಲ ಪ್ರಶ್ನೆಗಳಿದ್ದವು.
ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ 2023 ಫಲಿತಾಂಶ
ಜೆಡಿಎಸ್: ಎಚ್.ಎ. ಸ್ವರೂಪ್- ಗೆಲುವು
ಬಿಜೆಪಿ: ಪ್ರೀತಂ ಗೌಡ
ಕಾಂಗ್ರೆಸ್: ರಂಗಸ್ವಾಮಿ
ಕಳೆದ ಬಾರಿಯ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಬಿಜೆಪಿಯ ಪ್ರೀತಂ ಗೌಡ ಗೆದ್ದಿದ್ದರು. ಜೆಡಿಎಸ್ನಿಂದ ಭವಾನಿ ರೇವಣ್ಣ ನಿಲ್ಲಲು ಬಯಸಿದ್ದರಾದರೂ ಎಚ್.ಪಿ. ಸ್ವರೂಪ್ ಅವರಿಗೆ ಟಿಕೆಟ್ ಕೊಡಲಾಗಿತ್ತು. ಮಾಜಿ ಜೆಡಿಎಸ್ ಶಾಸಕ ಎಚ್.ಎಸ್. ಪ್ರಕಾಶ್ ಅವರ ಮಗ ಸ್ವರೂಪ್ ಅವರಿಗೆ ಟಿಕೆಟ್ ಕೊಡುವ ಮೂಲಕ ದೇವೇಗೌಡರ ಕುಟುಂಬದೊಳಗಿನ ಬಿರುಕು ಹೆಚ್ಚಿದಂತಿತ್ತು. ಈ ಸಂಕಷ್ಟದ ಮಧ್ಯೆ ಜೆಡಿಎಸ್ ಅಭ್ಯರ್ಥಿಯ ಗೆಲುವಿನ ಕನಸು ಈಡೇರುತ್ತದಾ ಎಂಬ ಅನುಮಾನ ಇತ್ತು. ಕೊನೆಗೆ ಸ್ವರೂಪ್ ಗೆಲುವಿನ ನಗೆ ಬೀರಿದ್ದಾರೆ.
ಹಾಸನ ಕ್ಷೇತ್ರದ ಹಿಂದಿನ ಚುನಾವಣಾ ಇತಿಹಾಸ ನೋಡುವುದಾದರೆ 1957ರಿಂದ ಈಚೆ 2018ರವರೆಗೆ 14 ಚುನಾವಣೆಗಳು ಈ ಕ್ಷೇತ್ರದಲ್ಲಿ ನಡೆದಿವೆ. ಜೆಡಿಎಸ್ ಹಾಗೂ ಅದಕ್ಕೂ ಹಿಂದಿನ ಜನತಾ ಪಕ್ಷ ಅತಿ ಹೆಚ್ಚು ಬಾರಿ ಗೆದ್ದಿವೆ. ಕಾಂಗ್ರೆಸ್ 2 ಬಾರಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿಗಳೂ ಎರಡು ಬಾರಿ ಗೆದ್ದಿದ್ದಾರೆ.
Published On - 3:20 am, Sat, 13 May 23