ಡಿಸೆಂಬರ್ 6ರ ನಂತರ ಮುಂದಿನ ನಡೆಯ ಬಗ್ಗೆ ಹೇಳುತ್ತೇನೆ: ವಿ ಸೋಮಣ್ಣ, ಮಾಜಿ ಸಚಿವ
ಹಿಂದೆ ಕೇಂದ್ರ ಸಚಿವರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊದಲಾದವರೆಲ್ಲ ತಮ್ಮ ಅಸಮಾಧಾನ ಪ್ರದರ್ಶಿಸಿದ್ದಾರೆ ಎಂದು ಹೇಳಿದ ಅವರು ರಾಜ್ಯ ಬಿಜೆಪಿ ಸೋಮನಹಳ್ಳಿ ಮುದುಕಿ ಕತೆಯನ್ನು ಹೋಲುತ್ತದೆ ಎಂದರು. 6ನೇ ತಾರೀಖಿನ ಬಳಿಕ ಎಲ್ಲ ತಿಳಿಸುವುದಾಗಿ ಮಾಜಿ ಸಚಿವ ಹೇಳಿದರು.
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ (V Somanna) ಪಕ್ಷದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸ್ಪಷ್ಟವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಡಿಸೆಂಬರ್ 6 ನೇ ತಾರೀಖಿನವರೆಗೆ ಯಾವುದೇ ಹೇಳಿಕೆ ನೀಡದಂತೆ ತಿಳಿಸಿರುವುದರಿಂದ ಅಲ್ಲಿಯವರೆಗ ಏನೂ ಮಾತಾಡಲ್ಲ ಅಂತ ಹೇಳಿದರು. ಆಸಮಾಧಾನಗೊಂಡಿರುವ ನಾಯಕರು ತಮ್ಮ ಕೋಪ ಹೊರಹಾಕಿದ್ದಾರೆ, ಸೋಮಣ್ಣ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅಂತ ಕೇಳಿದಾಗ ನಿನ್ನೆ ಹಿರಿಯ ನಾಯಕರಾಗಿರುವ ಅರವಿಂದ ಲಿಂಬಾವಳಿ (Aravind Limbavali) ಹೇಳಿದ್ದು ಅಕ್ಷರಶಃ ಸತ್ಯ, ಹಿಂದೆ ಕೇಂದ್ರ ಸಚಿವರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮೊದಲಾದವರೆಲ್ಲ ತಮ್ಮ ಅಸಮಾಧಾನ ಪ್ರದರ್ಶಿಸಿದ್ದಾರೆ ಎಂದು ಹೇಳಿದ ಅವರು ರಾಜ್ಯ ಬಿಜೆಪಿ ಸೋಮನಹಳ್ಳಿ ಮುದುಕಿ ಕತೆಯನ್ನು ಹೋಲುತ್ತದೆ ಎಂದರು. 6ನೇ ತಾರೀಖಿನ ಬಳಿಕ ಎಲ್ಲ ತಿಳಿಸುವುದಾಗಿ ಮಾಜಿ ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ