ಮುನಿರತ್ನರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ನನಗೆ ಖಂಡಿತ ಇಲ್ಲ: ಕುಸುಮಾ, ಆರ್ ಆರ್ ನಗರ ಪರಾಜಿತ ಅಭ್ಯರ್ಥಿ

|

Updated on: Oct 11, 2023 | 6:14 PM

ಅಸಲಿಗೆ ರಾಜರಾಜೇಶ್ವರಿ ನಗರದಲ್ಲಿ ನಡೆದ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಅಕ್ರಮ (irregularities) ನಡೆದಿದೆ ಮತ್ತು ಕಳಪೆ ಕಾಮಗಾರಿ ಬಗ್ಗೆಯೂ ಸಾಕಷ್ಟು ದೂರುಗಳು ಕೇಳಿಬಂದ ಬಳಿಕ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಸುಮಾರು 120 ಕೋಟಿ ರೂ.ಗಳಷ್ಟು ಅವ್ಯವಹಾರ ನಡೆದಿರುವ ವಿಷಯ ಬಯಲಾಗಿದೆ. ಇದೇ ಕಾರಣಕ್ಕೆ ಅನುದಾನವನ್ನು ತಡೆಹಿಡಿಯಲಾಗಿದೆಯೇ ಬೇರಾವ ಕಾರಣಕ್ಕೂ ಅಲ್ಲ ಎಂದು ಕುಸುಮಾ ಹೇಳಿದರು.

ಬೆಂಗಳೂರು: ಇವತ್ತಿನ ಎಲ್ಲ ನಾಟಕೀಯ ಬೆಳವಣಿಗೆಗಳ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಮುನಿರತ್ನ ನಾಯ್ಡು (Munirathna Naidu), ಕ್ಷೇತ್ರದಲ್ಲಿ ಪರಾಜಿತ ಅಭ್ಯರ್ಥಿ ಕುಸುಮಾ (Kusum) ಅವರ ಹಸ್ತಕ್ಷೇಪ ಜಾಸ್ತಿಯಾಗುತ್ತಿದೆ ಅಂತ ಹಲವು ಆರೋಪಗಳನ್ನು ಮಾಡಿದರು. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಇದೇ ಹಿನ್ನೆಲೆಯಲ್ಲಿ ಕುಸುಮಾ ಅವರನ್ನು ಮಾತಾಡಿಸಿದಾಗ ಶಾಸಕ ಮಾಡಿದ ಆರೋಪಗಳನ್ನು ತಳ್ಳಿಹಾಕಿದರು. ಮುನಿರತ್ನ ಅವರನ್ನು ಟಾರ್ಗೆಟ್ ಮಾಡಿ ತನಗೇನೂ ಆಗಬೇಕಿಲ್ಲ, ಅವರೇ ಇಲ್ಲಸಲ್ಲದ ಡ್ರಾಮಾಗಳನ್ನು ಮಾಡುತ್ತಿದ್ದಾರೆ ಎಂದು ಕುಸುಮಾ ಹೇಳಿದರು. ಮುಂದುವರಿದು ಮಾತಾಡಿದ ಕುಸುಮಾ, ವಾಸ್ತವಾಂಶ ಬೇರೆಯೇ ಇದೆ, ಅಸಲಿಗೆ ರಾಜರಾಜೇಶ್ವರಿ ನಗರದಲ್ಲಿ ನಡೆದ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಅಕ್ರಮ (irregularities) ನಡೆದಿದೆ ಮತ್ತು ಕಳಪೆ ಕಾಮಗಾರಿ ಬಗ್ಗೆಯೂ ಸಾಕಷ್ಟು ದೂರುಗಳು ಕೇಳಿಬಂದ ಬಳಿಕ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಸುಮಾರು 120 ಕೋಟಿ ರೂ.ಗಳಷ್ಟು ಅವ್ಯವಹಾರ ನಡೆದಿರುವ ವಿಷಯ ಬಯಲಾಗಿದೆ. ಇದೇ ಕಾರಣಕ್ಕೆ ಅನುದಾನವನ್ನು ತಡೆಹಿಡಿಯಲಾಗಿದೆಯೇ ಬೇರಾವ ಕಾರಣಕ್ಕೂ ಅಲ್ಲ ಎಂದು ಕುಸುಮಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ