HD Kumaraswamy: ಕ್ಷಮೆ ಕೇಳುವಂತಹ ಹೇಳಿಕೆ ನಾನು ನೀಡಿಲ್ಲ, ಈ ವಿಚಾರದಲ್ಲಿ ಕ್ಷಮೆ ಕೇಳುವ ಪ್ರಶ್ನೆಯೂ ಇಲ್ಲ -ಹೆಚ್ಡಿ ಕುಮಾರಸ್ವಾಮಿ
ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ, ಶಾಂತಿ ಬೇಕಿಲ್ಲ. ಗಾಂಧೀಜಿ ಹತ್ಯೆ ಮಾಡಿದವನ ದೇವಸ್ಥಾನ ಕಟ್ಟಲು ಹೊರಟಿದ್ದಾರೆ. ರಾಜಕೀಯ ಲೆಕ್ಕಾಚಾರದಲ್ಲಿ ನಾನು ಹೇಳಿಕೆ ನೀಡಿಲ್ಲ.
ನಾನು ಯಾವತ್ತೂ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿಲ್ಲ. ನಾನು ಪ್ರಹ್ಲಾದ್ ಜೋಶಿ ಬಗ್ಗೆ ಮಾತ್ರ ಮಾತನಾಡುತ್ತಿರುವುದು ಎಂದು ಟಿವಿ9ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಾನು ಬಿಜೆಪಿ ಜೊತೆಗೂ ಒಂದು ಬಾರಿ ಸರ್ಕಾರ ಮಾಡಿದ್ದೇನೆ. ಬ್ರಾಹ್ಮಣ ಸಮುದಾಯದ ಹಲವರು ನನ್ನ ಸ್ನೇಹಿತರಿದ್ದಾರೆ. ರಾಮಕೃಷ್ಣ ಹೆಗಡೆ ಸಿಎಂ ಆಗಲು ಹೆಚ್.ಡಿ.ದೇವೇಗೌಡರೇ ಕಾರಣ. ರಾಮಕೃಷ್ಣ ಹೆಗಡೆರಿಂದ ಜನತಾದಳ ಪಕ್ಷ ಹುಟ್ಟಿದ್ದಲ್ಲ. ಈ ಭಾಗದ ಬ್ರಾಹ್ಮಣ ಸಮುದಾಯದ ಸಂಸ್ಕೃತಿ ನನಗೆ ಗೊತ್ತಿದೆ. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ, ಶಾಂತಿ ಬೇಕಿಲ್ಲ. ಗಾಂಧೀಜಿ ಹತ್ಯೆ ಮಾಡಿದವನ ದೇವಸ್ಥಾನ ಕಟ್ಟಲು ಹೊರಟಿದ್ದಾರೆ. ರಾಜಕೀಯ ಲೆಕ್ಕಾಚಾರದಲ್ಲಿ ನಾನು ಹೇಳಿಕೆ ನೀಡಿಲ್ಲ. ರಾಜ್ಯದ ಸಮಸ್ಯೆಗಳ ವಿಚಾರ ಮುಂದಿಟ್ಟು ಹೇಳಿಕೆ ನೀಡಿದ್ದೇನೆ. ನಾನು ಯಾವುದೇ ತಪ್ಪು ಮಾತನಾಡಿಲ್ಲ. ಈ ವಿಚಾರದಲ್ಲಿ ಕ್ಷಮೆ ಕೇಳುವ ಪ್ರಶ್ನೆಯೂ ಇಲ್ಲ ಎಂದು ಹೆಚ್ಡಿಕೆ ತಿಳಿಸಿದ್ದಾರೆ.
Published on: Feb 07, 2023 10:45 AM