‘ನನಗೆ ಗೌರವ ಕೊಡೋಕೆ ಬರುತ್ತೆ, ಇನ್ನೂ ಹೆಚ್ಚು ಬೇಕು ಎಂದರೆ ಶೃಂಗೇರಿಗೆ ಹೋಗಿ ಕಲಿಯಬೇಕು’; ತನಿಷಾ

Updated on: Jan 24, 2024 | 1:45 PM

‘ಶೃಂಗೇರಿಗೆ ತೆರಳಿ ಗೌರವ ನೀಡೋದು ಹೇಗೆ ಎಂದು ಕಲಿತುಕೊಂಡು ಬರುತ್ತೇನೆ’ ಎಂದು ತನಿಷಾ ಹೊರ ಹೋಗುವಾಗ ತನಿಷಾ ಹೇಳಿದ್ದರು. ಈ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ತನಿಷಾ ಪ್ರತಿಕ್ರಿಯಿಸಿದ್ದಾರೆ.

ತನಿಷಾ ಕುಪ್ಪಂಡ (Tanisha Kuppanda) ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಅವರು ಎಲಿಮಿನೇಟ್ ಆಗುವುದಕ್ಕೂ ಮೊದಲು ಸಂಗೀತಾ ಅವರು ‘ತನಿಷಾಗೆ ಗೌರವ ನೀಡೋಕೆ ಬರುವುದಿಲ್ಲ’ ಎಂದಿದ್ದರು. ಹೀಗಾಗಿ ತನಿಷಾ ಹೊರ ಹೋಗುವಾಗ ಸಂಗೀತಾಗೆ ಒಂದು ಮಾತನ್ನು ಹೇಳಿದ್ದರು. ‘ಶೃಂಗೇರಿಗೆ ತೆರಳಿ ಗೌರವ ನೀಡೋದು ಹೇಗೆ ಎಂದು ಕಲಿತುಕೊಂಡು ಬರುತ್ತೇನೆ’ ಎಂದಿದ್ದರು. ಈ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ತನಿಷಾ (Tanisha) ಅವರು ಟಿವಿ9 ಕನ್ನಡದ ಜೊತೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ನನಗೆ ಗೌರವ ನೀಡೋಕೆ ಬರುತ್ತದೆ. ಆದರೆ, ಅವರು ಇನ್ನೂ ಹೆಚ್ಚು ಗೌರವ ನಿರೀಕ್ಷಿಸುತ್ತಿದ್ದಾರೆ ಎಂದರೆ ನಾನು ಶೃಂಗೇರಿಗೆ ಹೋಗಿ ಶಾರದಾಂಬೆಯ ಬಳಿಯೇ ಕಲಿತುಕೊಂಡು ಬರಬೇಕು’ ಎಂದಿದ್ದಾರೆ ತನಿಷಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More