‘ಸಂಗೀತಾ ಮಾಡೋದೆಲ್ಲ ನಾಟಕೀಯವಾಗಿ ಕಾಣುತ್ತದೆ’; ಕಾರಣ ನೀಡಿದ ತನಿಷಾ
ತನಿಷಾ ಕುಪ್ಪಂಡ ಅವರು ಇತ್ತೀಚೆಗೆ ಎಲಿಮಿನೇಟ್ ಆದರು. ಅವರು ಸಂಗೀತಾ ಶೃಂಗೇರಿ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ವಿವರಿಸಿದ್ದಾರೆ. ಸಂಗೀತಾ ಶೃಂಗೇರಿ ಮಾಡೋ ವಿಚಾರಗಳು ಎಷ್ಟು ನಾಟಕೀಯವಾಗಿ ಇತ್ತು ಎಂಬುದನ್ನು ತನಿಷಾ ಹೇಳಿದ್ದಾರೆ.
ತನಿಷಾ ಕುಪ್ಪಂಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಸಂಗೀತಾ ಶೃಂಗೇರಿ ಮಾಡೋ ವಿಚಾರಗಳು ಎಷ್ಟು ನಾಟಕೀಯವಾಗಿ ಇತ್ತು ಎಂಬುದನ್ನು ತನಿಷಾ ವಿವರಿಸಿದ್ದಾರೆ. ‘ಸಂಗೀತಾ (Sangeetha Sringeri) ಅವರು ಕಾರ್ತಿಕ್ನ ಹಿಂದೆ ಹಿಂದೆ ಬರುತ್ತಿದ್ದರು. ಅದು ನೋಡಿದವರಿಗೆ ಗೊತ್ತಾಗುತ್ತಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಸಂಗೀತಾ ಹೇಳೋದನ್ನು ಹೇಳಿಬಿಡುತ್ತಾರೆ. ನಂತರ ಕಾರ್ತಿಕ್ ಕ್ಷಮೆ ಕೇಳಲಿ ಎಂದು ನಿರೀಕ್ಷಿಸುತ್ತಾರೆ. ಕ್ಷಮೆ ಕೇಳಿದರೆ ಅದು ಜೆನ್ಯೂನ್ ಅಲ್ಲ ಎನ್ನುತ್ತಾರೆ. ಇದು ನಾಟಕೀಯವಾಗಿ ಕಾಣುತ್ತಿತ್ತು’ ಎಂದಿದ್ದಾರೆ ತನಿಷಾ ಕುಪ್ಪಂಡ. ಬಿಗ್ ಬಾಸ್ ಫಿನಾಲೆ ಸಮೀಪದಲ್ಲಿರುವಾಗ ತನಿಷಾ ಔಟ್ ಆದರು. ಅವರಿಗೆ ಈಗ ಬೇಡಿಕೆ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

