AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿದ ಯುವತಿಯ ಅಣ್ಣ; ಅವಳೊಂದಿಗೆ ತಾಯಿಯನ್ನೂ ಕೆರೆಗೆ ನೂಕಿ ಕೊಂದುಬಿಟ್ಟನೇ?

ಧನುಶ್ರೀ ಮತ್ತು ಅನಿತಾರನ್ನು ನೆಂಟರ ಮನೆಗೆ ಕರೆದೊಯ್ಯುವುದಾಗಿ ಹೇಳಿ ಕೆರೆದಡಕ್ಕೆ ಕರೆದುಕೊಂಡ ಬಂದ ನಿತಿನ್ ಇಬ್ಬರನ್ನೂ ಕೆರೆಗೆ ನೂಕಿದ ಎಂದು ಹೇಳಲಾಗಿದೆ. ಖುದ್ದು ನಿತಿನ್ ತನ್ನ ತಂದೆಗೆ ತಾಯಿ ಮತ್ತು ತಂಗಿಯನ್ನು ಕೆರೆಗೆ ನೂಕಿ ಕೊಂದಿದ್ದನ್ನು ಹೇಳಿ ಮನೆಯಲ್ಲಿ ಆರಾಮಾಗಿ ನಿದ್ರಿಸಿದನಂತೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 24, 2024 | 12:40 PM

Share

ಮೈಸೂರು: ಮತ್ತೊಂದು ಪ್ರೇಮಕತೆ ದುರಂತ (tragic love story) ಅಂತ್ಯ ಕಂಡಿದೆ. ತನ್ನ ತಂಗಿ ಅನ್ಯಧರ್ಮೀಯ ಯುವಕನನ್ನು ಲವ್ ಮಾಡುತ್ತಿದ್ದಳೆಂಬ ಒಂದೇ ಕಾರಣಕ್ಕೆ ಅಣ್ಣನೊಬ್ಬ ಆಕೆಯೊಂದಿಗೆ ತನ್ನ ತಾಯಿಯನ್ನೂ ಕೆರೆಗೆ ತಳ್ಳಿ ಕೊಂದ ದಾರುಣ ಘಟನೆ ಜಿಲ್ಲೆ ಹುಣಸೂರು (Hunsur) ತಾಲ್ಲೂಕಿನ ಮರೂರು ಗ್ರಾಮದಲ್ಲಿ ಜರುಗಿದೆ. ಕೆರೆಯಲ್ಲಿ ಮುಳುಗಿ ಸತ್ತವರನ್ನು 19-ವರ್ಷ-ವಯಸ್ಸಿನ ಯುವತಿ ಧನುಶ್ರೀ (Dhanushri) ಮತ್ತು 43-ವರ್ಷ ವಯಸ್ಸಿನ ಅನಿತಾ (Anita) ಎಂದು ಗುರುತಿಸಲಾಗಿದೆ. ಅವರನ್ನು ಕೆರೆಗೆ ತಳ್ಳಿದ ಆರೋಪ ಹೊತ್ತಿರುವ ಯುವಕನ ಹೆಸರು ನಿತಿನ್. ಅಗ್ನಿ ಶಾಮಕದಳ ಸಿಬ್ಬಂದಿ ಅನಿತಾ ಮತ್ತು ಧನುಶ್ರೀ ದೇಹಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಧನುಶ್ರೀ ಮತ್ತು ಅನಿತಾರನ್ನು ನೆಂಟರ ಮನೆಗೆ ಕರೆದೊಯ್ಯುವುದಾಗಿ ಹೇಳಿ ಕೆರೆದಡಕ್ಕೆ ಕರೆದುಕೊಂಡ ಬಂದ ನಿತಿನ್ ಇಬ್ಬರನ್ನೂ ಕೆರೆಗೆ ನೂಕಿದ ಎಂದು ಹೇಳಲಾಗಿದೆ. ಖುದ್ದು ನಿತಿನ್ ತನ್ನ ತಂದೆಗೆ ತಾಯಿ ಮತ್ತು ತಂಗಿಯನ್ನು ಕೆರೆಗೆ ನೂಕಿ ಕೊಂದಿದ್ದನ್ನು ಹೇಳಿ ಮನೆಯಲ್ಲಿ ಆರಾಮಾಗಿ ನಿದ್ರಿಸಿದನಂತೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ