ಮುರಿದು ಬಿತ್ತು ಇಶಾನಿ-ಮೈಖಲ್ ಪ್ರೇಮಕತೆ: ಕಾರಣ ಕಾರ್ತಿಕ್

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ನಡೆಯುತ್ತಿದ್ದ ಪ್ರೇಮಕತೆಯನ್ನು ಮುರಿದು ಬಿದ್ದಿದೆ. ಮೈಖಲ್ ಹಾಗೂ ಇಶಾನಿ ನಡುವೆ ಜೋರು ಜಗಳ ನಡೆದಿದ್ದು, ಇಶಾನಿಯಂತೂ ಮೈಖಲ್ ಅನ್ನು ಇನ್ನೆಂದಿಗೂ ನಂಬುವುದಿಲ್ಲ ಎಂದಿದ್ದಾರೆ. ಇವರ ಪ್ರೇಮ ಮುರಿದು ಬೀಳಲು ಕಾರಣವಾಗಿದ್ದು ಕಾರ್ತಿಕ್.

ಮುರಿದು ಬಿತ್ತು ಇಶಾನಿ-ಮೈಖಲ್ ಪ್ರೇಮಕತೆ: ಕಾರಣ ಕಾರ್ತಿಕ್
Follow us
ಮಂಜುನಾಥ ಸಿ.
|

Updated on: Nov 03, 2023 | 11:38 PM

ಈ ಸೀಸನ್​ನ ಬಿಗ್​ಬಾಸ್ (Bigg Boss) ಮನೆಯಲ್ಲಿ ಕಾರ್ತಿಕ್-ಸಂಗೀತಾ, ನಮ್ರತಾ-ಸ್ನೇಹಿತ್ ಜೊತೆಗೆ ಮೈಖಲ್-ಇಶಾನಿ ಜೋಡಿ ಪ್ರೇಕ್ಷಕರ ಗಮನ ಸೆಳೆದಿದೆ. ಕಾರ್ತಿಕ್-ಸಂಗೀತಾ ಹಾಗೂ ನಮ್ರತಾ-ಸ್ನೇಹಿತ್ ಅವರುಗಳು ಪರಸ್ಪರ ಅತ್ಮೀಯರಾಗಿದ್ದರೂ ಸಹ ಗೆಳೆಯರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಶಾನಿ-ಮೈಖಲ್ ಮಾತ್ರ ತಮ್ಮನ್ನು ತಾವು ಪ್ರೇಮಿಗಳೆಂದು ಬಿಗ್​ಬಾಸ್ ಮನೆಯಲ್ಲಿ ಘೋಷಿಸಿ ಕೊಂಡಿದ್ದಾರೆ. ಆದರೆ ಇದೀಗ ಮೈಖಲ್ ಹಾಗೂ ಇಶಾನಿ ನಡುವಿನ ಪ್ರೇಮ ಸಂಬಂಧ ಮುರಿದು ಬಿದ್ದಿದೆ. ಇದಕ್ಕೆ ಕಾರಣವಾಗಿದ್ದು ಕಾರ್ತಿಕ್!

ಹೌದು, ಇಶಾನಿ, ವಿನಯ್ ಅವರ ತಂಡದಲ್ಲಿದ್ದರು. ಮೈಖಲ್ ಎದುರಾಳಿ ತಂಡವಾದ ಸಂಗೀತಾ ತಂಡದಲ್ಲಿದ್ದರು. ಟಾಸ್ಕ್​ಗಳೆಲ್ಲ ಮುಗಿದು, ವಿನಯ್ ತಂಡ ಗೆದ್ದಿದೆ. ವಿನಯ್ ಕ್ಯಾಪ್ಟನ್ ಆಗಿದ್ದಾರೆ, ಸಂಗೀತಾ ಕಳಪೆ ಪಟ್ಟ ಹೊತ್ತು ಜೈಲಿಗೆ ತೆರಳಿದ್ದಾರೆ. ವಿನಯ್​ ಅನ್ನು ಮನೆಯ ಸದಸ್ಯರು ಅಭಿನಂದಿಸಿದರೆ, ಸಂಗೀತಾರನ್ನು ಜೈಲಿಗೆ ಕಳಿಸಿದ್ದಾರೆ.

ಇದೆಲ್ಲ ಆದ ಬಳಿಕ ವಿನಯ್ ಹಾಗೂ ತನಿಷಾ ಇಂದು ಅಡುಗೆ ಮಾಡುತ್ತಿರುವಾಗ ಎದುರು ಮೈಖಲ್ ಹಾಗೂ ಇಶಾನಿ ಕೂತಿದ್ದರು. ಸಂಗೀತಾ ಬಗ್ಗೆ ನೆಗೆಟಿವ್ ಆಗಿ ಹೇಳಿದ ಇಶಾನಿಗೆ ಸಂಗೀತಾ ನನ್ನ ಗೆಳತಿ ನಾನು ಅವರಿಗೆ ಬೆಂಬಲಿಸುತ್ತೇನೆ ಎಂದರು ಕಾರ್ತಿಕ್. ಬಳಿಕ ಇಶಾನಿ, ನೀನು ಸಂಗೀತಾಳ ಕೈಗೊಂಬೆ ಎಂದರು. ಆ ಮಾತನ್ನು ಸ್ವೀಕರಿಸದ ಕಾರ್ತಿಕ್, ಅದನ್ನು ಅಲ್ಲಗಳೆದರು. ಬಳಿಕ ನೀನು ಸಹ ಇಲ್ಲ, ಒಬ್ಬಳೇ ನಿಂತು ನಿನ್ನ ಕೈಯಲ್ಲಿ ಆಡಿ ಗೆಲ್ಲೋಕಾಗಲ್ಲ ಅಂತ ಗೋಡೆಯ ಹಿಂದೆ ಅವಿತುಕೊಂಡಿದ್ದೀಯ. ಈಗಲೂ ಹೇಳ್ತೀನಿ ಒಬ್ಬಳೇ ನಿಂತು ಆಡಿ ಗೆಲ್ಲುವ ತಾಕತ್ತು ನಿನಗೆ ಇಲ್ಲ” ಎಂದರು ಕಾರ್ತಿಕ್.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಕುಸ್ತಿ ಅಖಾಡ: ಕೈ-ಕೈ ಮಿಲಾಯಿಸಿದ ಸ್ಪರ್ಧಿಗಳು, ಗೆದ್ದಿದ್ದು ಯಾರು?

ಇದಕ್ಕೆ ಸಿಟ್ಟಾದ ಇಶಾನಿ, ಮಹಿಳೆಯರಿಗೆ ಆಡಿ ಗೆಲ್ಲುವ ತಾಕತ್ತು ಇಲ್ಲ ಎಂದು ಹೇಳಿದೆ ಎಂದು ಜಗಳ ಮಾಡಿದಳು, ಬಳಿಕ ಆಕೆಯನ್ನು ಸಮಾಧಾನ ಮಾಡಲು ಮೈಖಲ್ ಸಹ ಹೋದರು. ಆದರೆ ಮೈಖಲ್, ಕಾರ್ತಿಕ್ ಮಹಿಳೆಯರಿಗೆ ಗೆಲ್ಲುವ ತಾಕತ್ತು ಇಲ್ಲ ಎಂದು ಹೇಳಲಿಲ್ಲ, ಬದಲಿಗೆ ನಿನಗೆ ವೈಯಕ್ತಿಕವಾಗಿ ಗೆಲ್ಲುವ ತಾಕತ್ತು ಇಲ್ಲ ಎಂದು ಹೇಳಿದರು ಎಂದು ಇರುವ ಸತ್ಯವನ್ನೇ ಹೇಳಿದರು. ಆದರೆ ಅದು ಇಶಾನಿಗೆ ಇಷ್ಟವಾಗಿಲ್ಲ, ಮೈಖಲ್ ಮಾತಿನಿಂದ ಕೆರಳಿದ ಇಶಾನಿ, ನೀನು ಒಬ್ಬ ಬಾಯ್​ಫ್ರೆಂಡಾ ಥೂ ಎಂದು ಹೊರಟು ಹೋದರು.

ಬಳಿಕ ಬಾತ್​ರೂಂನಲ್ಲಿ ಅಳುತ್ತಾ ಕೂತಿದ್ದ ಇಶಾನಿಯನ್ನು ಮೈಖಲ್ ಸಮಾಧಾನ ಮಾಡಲು ಯತ್ನಿಸಿದ. ಆಗಲೂ ಸಹ ಇಶಾನಿ, ಅವನು ಹೇಳಿದ್ದಕ್ಕಿಂತಲೂ ಮೈಖಲ್ ನನ್ನ ಪರ ನಿಲ್ಲದೇ ಇದ್ದದ್ದು ನನಗೆ ಹೆಚ್ಚು ಬೇಸರವಾಯ್ತು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಮೈಖಲ್, ”ಗೆಳೆಯ ಆಗಲಿ ಪ್ರೇಯಸಿ ಆಗಲಿ ಯಾರಾದರೂ ಆಗಲಿ, ಸುಳ್ಳು ಹೇಳಿದ್ದನ್ನು ಖಂಡಿಸಬೇಕು ಎಂಬುದು ನನ್ನ ಪಾಲಿಸಿ” ಎಂದರು. ಇದು ಇಶಾನಿಯನ್ನು ಇನ್ನಷ್ಟು ಕೆರಳಿಸಿತು, ನನ್ನನ್ನೇ ಸುಳ್ಳಿ ಎನ್ನುತ್ತೀಯ ಎಂದು ರೇಗಿದರು. ಆಗ ಬಂದ ಸ್ನೇಹಿತ್​ರನ್ನು ಅಪ್ಪಿಕೊಂಡು ಜೋರಾಗಿ ಅಳಲು ಪ್ರಾರಂಭಿಸಿದರು ಇಶಾನಿ.

ಪದೇ ಪದೇ ಇಶಾನಿ, ಮೈಖಲ್ ಅನ್ನು ನಿಂದಿಸುವ ದನಿಯಲ್ಲಿ ಮಾತನಾಡಲು ಆರಂಭಿಸಿದಾಗ ಅಷ್ಟು ಹೊತ್ತು ಇಶಾನಿಯ ಮಾತು ಕೇಳಿ ಬೇಸರವಾಗಿದ್ದ ಮೈಖಲ್ ಅಲ್ಲಿಂದ ಸಿಟ್ಟಿನಿಂದ ಹೊರಟರು, ಹೋಗುವಾಗ ‘ಸೈಕೋ’ ಎಂದು ಹೇಳಿ ಹೋದರು. ಇದು ಇಶಾನಿಯನ್ನು ಇನ್ನೂ ಜೋರು ಅಳುವಂತೆ ಮಾಡಿತು. ನನ್ನನ್ನು ಸೈಕೋ ಎಂದಿದ್ದಾನೆ. ನಾನು ಇನ್ನು ಮುಂದೆ ಅವನೊಟ್ಟಿಗೆ ಇರುವುದಿಲ್ಲ ಎಂದೆಲ್ಲ ಜೋರು ಅಳಲು ಪ್ರಾರಂಭಿಸಿದರು. ವಿನಯ್, ನಮ್ರತಾ, ಸ್ನೇಹಿತ್ ಅವರುಗಳು ಇಶಾನಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರಾದರೂ ಇಶಾನಿಯ ಅಳು ನಿಲ್ಲಲಿಲ್ಲ.

ಅಲ್ಲಿಗೆ ಬಿಗ್​ಬಾಸ್ ಮನೆಯಲ್ಲಿ ಮೈಖಲ್-ಇಶಾನಿಯ ಪ್ರೇಮಕತೆ ಶುರುವಾದಷ್ಟೆ ಬೇಗ ಮುಗಿದು ಹೋದಂತಿದೆ. ಶನಿವಾರ ಬರುವ ಸುದೀಪ್ ಅವರು ಇಬ್ಬರ ಹೃದಯಕ್ಕೆ ಆದ ಗಾಯಕ್ಕೆ ಮುಲಾಮು ಹಚ್ಚುತ್ತಾರಾ ನೋಡಬೇಕು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು