ರಾಜಣ್ಣ ಹೇಳುತ್ತಿರುವ ಹನಿ ಟ್ರ್ಯಾಪ್ ಪ್ರಕರಣದ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವ ಎಂಬಿ ಪಾಟೀಲ್
ರಾಜಣ್ಣ ಹಿರಿಯರಿದ್ದಾರೆ, ಸಚಿವರಾಗಿ ಜಬಾಬ್ದಾರಿಯುತ ಸ್ಥಾನದಲ್ಲಿದ್ದಾರೆ, ಹಾಗಾಗಿ ಅವರು ಸತ್ಯವನ್ನೇ ಹೇಳಿರುತ್ತಾರೆ, ಹಾಗಾಗಿ ಹನಿ ಟ್ರ್ಯಾಪ್ ಪ್ರಕರಣದ ಬಗ್ಗೆ ಅವರನ್ನು ಕೇಳುವುದೇ ಒಳಿತು ಎಂದು ಪಾಟೀಲ್ ಹೇಳಿದರು. ಅಥವಾ ಏನು ನಡೆದಿದೆ, ಯಾಕೆ ನಡೆದಿದೆ ಅಂತ ಮಾಧ್ಯಮದವರೆಲ್ಲ ತನ್ನನ್ನು ಎಜುಕೇಟ್ ಮಾಡಲಿ, ಆಮೇಲೆ ತಾನು ಹನಿ ಟ್ರ್ಯಾಪ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ಪಾಟೀಲ್ ಹೇಳಿದರು.
ಬೆಂಗಳೂರು, ಮಾರ್ಚ್ 20: ಇವತ್ತಿನ ವಿಧಾನಸಭಾ ಕಲಾಪ ಮುಗಿದ ಬಳಿಕ ಮಾಧ್ಯಮಗಳೊಡನೆ ಮಾತಾಡಿದ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹನಿ ಟ್ರ್ಯಾಪ್ (honey trap) ಬಗ್ಗೆ ಪ್ರಶ್ನೆ ಕೇಳಿದಾಗ, ತನ್ನನ್ನೇನೂ ಕೇಳಬೇಡಿ, ಅದರ ಬಗ್ಗೆ ಏನೂ ಗೊತ್ತಿಲ್ಲ, ಗೊತ್ತಿರದ ವಿಷಯದ ಬಗ್ಗೆ ತಾನೇನೂ ಮಾತಾಡಲ್ಲ, ಮಾಹಿತಿ ಇದ್ದಿದ್ದರೆ ಸಮಗ್ರವಾಗಿ ಮಾತಾಡುತ್ತಿದ್ದೆ ಎಂದು ಹೇಳಿದರು. ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಾಜಣ್ಣ ಅವರು ಹೇಳಿದ್ದರೆ, ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಅಂತೆಲ್ಲ ಅವರಿಗೆ ಗೊತ್ತಿರುತ್ತದೆ, ಎಲ್ಲ ಮಾಹಿತಿಯನ್ನು ಅವರೇ ನೀಡುತ್ತಾರೆ ಎಂದು ಪಾಟೀಲ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್: ಡಿಕೆ ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ