Vijayanand Kashappanavar; ಮಂತ್ರಿ ಸ್ಥಾನ ಈಗ ಸಿಕ್ಕಿಲ್ಲ, ಆದರೆ ಮುಂದೆ ಖಂಡಿತ ಸಿಗಲಿದೆ: ವಿಜಯಾನಂದ್ ಕಾಶಪ್ಪನವರ್, ಶಾಸಕ

|

Updated on: May 27, 2023 | 4:35 PM

ಜನರ ವಿಶ್ವಾಸ ಉಳಿಸಿಕೊಂಡು ಯಾವುದೇ ಸಮಸ್ಯೆಯಿಲ್ಲದೆ 5 ವರ್ಷಗಳ ಕಾಲ ಸರ್ಕಾರ ನಡೆಸಬೇಕಿದೆ, ತನಗೆ ಈಗ ಅವಕಾಶ ಸಿಕ್ಕಿರದಿದ್ದರೂ ಮುಂದೆ ಸಿಕ್ಕುವ ಭರವಸೆಯಿದೆ ಎಂದು ಕಾಶಪ್ಪನವರ್ ಹೇಳಿದರು.

ಬೆಂಗಳೂರು: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಮಂತ್ರಿಯಾಗುವ ದೊಡ್ಡ ಕನಸು ಹೊತ್ತಿದ್ದರು ಆದರೆ, ಅವರಿಗೆ ಬಸ್ ಮಿಸ್ ಆಗಿದೆ. ನಗರದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು, ಮಂತ್ರಿ ಸ್ಥಾನ ಕೈತಪ್ಪಿದ್ದರಿಂದ ನಿರಾಶೆಯಾಗಿರೋದು ಸತ್ಯ, ಲಿಂಗಾಯತ ಸಮುದಾಯ (Lingayat community) 12 ಶಾಸಕರಿಗೆ ಮಂತ್ರಿ ಸ್ಥಾ ಸಿಕ್ಕಿದೆ, ಇನ್ನಿಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದಿತ್ತು ಎಂದು ಹೇಳಿದರು. 1999ರಲ್ಲಿ ತಮ್ಮ ತಂದೆ ಎಸ್ ಆರ್ ಕಾಶಪ್ಪನರ್ (SR Kashappanavar) ನಂತರ ಬಾಗಲಕೋಟೆಗೆ ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಭಾಗದ ಜನರಿಗೆ ಅಸಮಾಧಾನ ಹಾಗೂ ಅಕ್ರೋಶ ಮೂಡಿಸಿದೆ. ಆದರೆ ಜನ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿದ್ದಾರೆ, ಅವರ ವಿಶ್ವಾಸ ಉಳಿಸಿಕೊಂಡು ಯಾವುದೇ ಸಮಸ್ಯೆಯಿಲ್ಲದೆ 5 ವರ್ಷಗಳ ಕಾಲ ಸರ್ಕಾರ ನಡೆಸಬೇಕಿದೆ, ತನಗೆ ಈಗ ಅವಕಾಶ ಸಿಕ್ಕಿರದಿದ್ದರೂ ಮುಂದೆ ಸಿಕ್ಕುವ ಭರವಸೆಯಿದೆ ಎಂದು ಕಾಶಪ್ಪನವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: May 27, 2023 04:35 PM