Vijayanand Kashappanavar; ಲಿಂಗಾಯತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಬೇಕು, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ವಿಜಯಾನಂದ ಕಾಶಪ್ಪನವರ್
ಮುಖ್ಯಮಂತ್ರಿ ಪದಗ್ರಹಣ ಸಮಾರಂಭ ನಾಳೆ ನಡೆಯಬಹುದು ಎಂದು ಕಾಶಪ್ಪನವರ್ ಹೇಳಿದರು.
ದೆಹಲಿ: ಎಲ್ಲೆಡೆ ಸಿದ್ದರಾಮಯ್ಯನವರೇ (Siddaramaiah) ಮುಂದಿನ ಮುಖ್ಯಮಂತ್ರಿ ಅಂತ ಸುದ್ದಿ ಹರಡಿದ್ದರೆ, ಕಳೆದ ಎರಡು-ಮೂರಿ ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ಮತ್ತು ಹುನುಗುಂದದಿಂದ (Hungind) ವಿಧಾನಭೆಗೆ ಆಯ್ಕೆಯಾಗಿರುವ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಇಂದು ಸೋನಿಯಾ ಗಾಂಧಿಯವರ ನಿವಾಸದ ಬಳಿ ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರನೊಂದಿಗೆ ಮಾತಾಡುವಾಗ, ಸಿದ್ದರಾಮಯ್ಯನವರೇ ಸಿಎಂ ಅಂತ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ, ಅದನ್ನು ಮಾಧ್ಯಮದವರು ಮಾತ್ರ ಹೇಳುತ್ತಿದ್ದಾರೆ ಎಂದರು. ತಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಲಿಂಗಾಯತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆಯಿದೆ ಎಂದು ಕಾಶಪ್ಪನವರ್ ಹೇಳಿದರು. ಮುಖ್ಯಮಂತ್ರಿ ಪದಗ್ರಹಣ ಸಮಾರಂಭ ನಾಳೆ ನಡೆಯಬಹುದು ಎಂದು ಕಾಶಪ್ಪನವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos