Dhawan Rakesh: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಅಂತ ಕೇಳಿ ತಾತನ ಮನೆಗೆ ಧಾವಿಸಿದ ಧವನ್ ರಾಕೇಶ್, ಆದರೆ ಸುದ್ದಿ ಇನ್ನೂ ಪಕ್ಕಾ ಅಲ್ಲ!
ಮೊಮ್ಮಗ ಧವನ್ ರಾಕೇಶ್ ಸಿದ್ದರಾಮಯ್ಯವರ ಮನೆಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಬೆಂಗಳೂರು: ಕೂಸು ಹುಟ್ಟುವ ಮುಂಚೆ ಕುಲಾವಿ ಅನ್ನುತ್ತಾರಲ್ಲ ಹಾಗಿದೆ ಸಿದ್ದರಾಮಯ್ಯ ಕುಟುಂಬ, ಅಭಿಮಾನಿ ಮತ್ತು ಬೆಂಬಲಿಗರ ಸಂಗತಿ. ಎಐಸಿಸಿ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ (Randeep Surjewala) ಅವರು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವುದಕ್ಕಿಂತ ಮೊದಲು ದೇಶದೆಲ್ಲೆಡೆ ಸಿದ್ದರಾಮಯ್ಯ (Siddaramaiah) ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಅಂತ ಚರ್ಚೆ ನಡೆಯುತಿತ್ತು. ಆದರೆ ಹೈಕಮಾಂಡ್ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ, ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಸುರ್ಜೆವಾಲಾ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ನಿರ್ಧಾರ ನೀಡಲಾಗಿದೆ, ನಾಳೆ ಅವರು ನೂತನ ಮುಖ್ಯಮಂತ್ರಿಯ ಘೋಷಣೆ ಮಾಡಲಿದ್ದಾರೆ ಎಂದು ಸುರ್ಜೆವಾಲಾ ಹೇಳಿದರು. ಏತನ್ಮಧ್ಯೆ, ಸಿದ್ದರಾಮಯ್ಯನವರ ಬೆಂಗಳೂರು ನಿವಾಸದಲ್ಲಿ ಸಂಭ್ರಮ ಶುರುವಾಗಿದೆ. ಅವರ ಮೊಮ್ಮಗ ಧವನ್ ರಾಕೇಶ್ (Dhawan Rakesh), ಸಿದ್ದರಾಮಯ್ಯವರ ಮನೆಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರ ನಿವಾಸದ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ