ಬಿಜೆಪಿ ಜೊತೆ ಮೈತ್ರಿ ಬೆಳೆಸುವ ಸಲಹೆಯನ್ನು ನಾನೇ ಕುಮಾರಸ್ವಾಮಿಗೆ ನೀಡಿದ್ದೆ: ಹೆಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

|

Updated on: Sep 27, 2023 | 1:16 PM

ಬಿಜೆಪಿ ಜೊತೆ ಮೈತ್ರಿ ಬೆಳೆಸುವ ನಿರ್ಧಾರವನ್ನು ಧಾವಂತದಲ್ಲಿ ತೆಗೆದುಕೊಂಡಿಲ್ಲ ಎಂದ ದೇವೇಗೌಡರು, ಅದನ್ನು ಜೆಡಿಎಸ್ ಪಕ್ಷದ 19 ಶಾಸಕರು ಮತ್ತು 8 ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚಿಸಲಾಯಿತು ಎಂದರು. ಅದು ಸರಿ, ಎರಡು ದಿನಗಳ ಹಿಂದೆ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ್ದ ದೇವೇಗೌಡರು ಬಿಜೆಪಿ-ಜೆಡಿಎಸ್ ಮೈತ್ರಿ ವಿಷಯ ತನಗೆ ಸಂಬಂಧಿಸಿದ್ದಲ್ಲ ಅದನ್ನು ಕುಮಾರಸ್ವಾಮಿ ನೋಡಿಕೊಳ್ಳುತ್ತಿದ್ದಾರೆ ಅಂತ ಹೇಳಿದ್ದರು.

ಬೆಂಗಳೂರು: ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ, ಮಾಜಿ ಪ್ರಧಾನ ಮಂತ್ರಿ ಮತ್ತು ಜೆಡಿಎಸ್ ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ (HD Devegowda) ಇಂದು ಒಂದು ಸುದೀರ್ಘವಾದ ಪತ್ರಿಕಾ ಗೋಷ್ಟಿ ನಡೆಸಿ ಹಲವಾರು ವಿಷಯಗಳ ಬಗ್ಗೆ ಮಾತಾಡಿದರು. ಬಿಜೆಪಿ ಜೊತೆ ಮೈತ್ರಿ (alliance with BJP) ಬೆಳೆಸಿರುವ ಬಗ್ಗೆ ಹೇಳಿದ ಅವರು ಆ ಸಲಹೆಯನ್ನು ಹೆಚ್ ಡಿ ಕುಮಾರಸ್ವಾಮಿಗೆ (HD Kumaraswamy) ನೀಡಿದ್ದು ತಾವೇ ಎಂದು ಹೇಳಿದರು. ಲೋಕಸಭಾ ಚುನಾವಣೆಗೆ ಮೊದಲು ಮೈತ್ರಿ ಬೆಳಸುವ ಹಿನ್ನೆಲೆಯಲ್ಲಿ ತಾವು ಅಮಿತ್ ಶಾ ಅವರೊಂದಿಗೆ ಮಾತಾಡಿರುವುದಾಗಿ ಹೇಳಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತುಂಬಾ ಬ್ಯೂಸಿಯಾಗಿದ್ದರಿಂದ ಮಾತಾಡುವುದು ಸಾಧ್ಯವಾಗಲಿಲ್ಲ ಎಂದರು. ಬಿಜೆಪಿ ಜೊತೆ ಮೈತ್ರಿ ಬೆಳೆಸುವ ನಿರ್ಧಾರವನ್ನು ಧಾವಂತದಲ್ಲಿ ತೆಗೆದುಕೊಂಡಿಲ್ಲ ಎಂದ ದೇವೇಗೌಡರು, ಅದನ್ನು ಜೆಡಿಎಸ್ ಪಕ್ಷದ 19 ಶಾಸಕರು ಮತ್ತು 8 ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚಿಸಲಾಯಿತು ಎಂದರು. ಅದು ಸರಿ, ಎರಡು ದಿನಗಳ ಹಿಂದೆ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ್ದ ದೇವೇಗೌಡರು ಬಿಜೆಪಿ-ಜೆಡಿಎಸ್ ಮೈತ್ರಿ ವಿಷಯ ತನಗೆ ಸಂಬಂಧಿಸಿದ್ದಲ್ಲ ಅದನ್ನು ಕುಮಾರಸ್ವಾಮಿ ನೋಡಿಕೊಳ್ಳುತ್ತಿದ್ದಾರೆ ಅಂತ ಹೇಳಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ