Assembly Session: ಇಳಿವಯಸ್ಸಿನಲ್ಲೂ ಸಕ್ರಿಯರಾಗಿರುವ ಹೆಚ್ ಡಿ ದೇವೇಗೌಡ ನಮಗೆಲ್ಲ ಆದರ್ಶ ಅನ್ನುತ್ತಾ ಬಿಎಸ್ ಯಡಿಯೂರಪ್ಪ ಭಾವುಕರಾದರು!
ಮಾಜಿ ಪ್ರಧಾನಿ ಇಳಿವಯಸ್ಸಿನಲ್ಲೂ ರಾಜಕೀಯವಾಗಿ ಸಕ್ರಿಯರಾಗಿ ರಾಜ್ಯದ ಹಲವಾರು ಸಮಸ್ಯೆಗಳಗೆ ಸಲಹೆಗಳನ್ನು ನೀಡುತ್ತಿರುತ್ತಾರೆ, ಅವರಿಂದ ನಾವು ಸಾಕಷ್ಟು ಕಲಿಯಬೇಕಿದೆ ಎಂದು ಹೇಳುವಾಗ ಯಡಿಯೂರಪ್ಪ ಭಾವುಕರಾದರು.
ಬೆಂಗಳೂರು: ಹದಿನೈದನೇ ವಿಧಾನಸಭೆ ಮತ್ತು ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರದ ಕೊನೆಯ ಅಧಿವೇಶನವಾಗಿದ್ದ ಸದನವು ಹಲವ ಭಾವನಾತ್ಮಕ ಕ್ಷಣಗಳಿಗೆ ಮತ್ತು ಬದ್ಧವೈರಿಗಳಂತೆ ಆಡುತ್ತಿದ್ದ ಪ್ರಮಖ ನಾಯಕರ ಪರಸ್ಪರ ಪ್ರಶಂಸೆಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿಗಳು ಮಾತಾಡುವಾಗ ಭಾವುಕರಾದರು. ಹಾಗೆಯೇ ತಮ್ಮ ಸಾರ್ಥಕ ರಾಜಕೀಯ ಬದುಕಿನಲ್ಲಿ ಕೊನೆಯಬಾರಿಗೆ ಅಧಿವೇಶನದಲ್ಲಿ ಮಾತಾಡಿದ ಹಿರಿಯ ಮುತ್ಸದ್ದಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ (BS Yediyurappa) ಯಡಿಯೂರಪ್ಪನವರು ಜೆಡಿಎಸ್ ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡರ (HD Devegowda) ಬಗ್ಗೆ ತಮಗಿರುವ ಗೌರವಾದರಗಳನ್ನು ವ್ಯಕ್ತಪಡಿಸಿದರು. ಮಾಜಿ ಪ್ರಧಾನಿಗಳು ತಮ್ಮ ಈ ಇಳಿವಯಸ್ಸಿನಲ್ಲೂ ರಾಜಕೀಯವಾಗಿ ಸಕ್ರಿಯರಾಗಿ ರಾಜ್ಯದ ಹಲವಾರು ಸಮಸ್ಯೆಗಳಿಗೆ ಸಲಹೆಗಳನ್ನು ನೀಡುತ್ತಿರುತ್ತಾರೆ, ಅವರಿಂದ ನಾವು ಸಾಕಷ್ಟು ಕಲಿಯಬೇಕಿದೆ ಎಂದು ಹೇಳುವಾಗ ಯಡಿಯೂರಪ್ಪ ಭಾವುಕರಾದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರನ್ಯಾ ಪ್ರಕರಣದಲ್ಲಿ ಡಿಅರ್ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್

ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ

ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?

ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ
