ವೈಯಕ್ತಿಕವಾಗಿ ಬಿಎಸ್ ಯಡಿಯೂರಪ್ಪ ಜೊತೆ ವೈಮನಸ್ಸಿದ್ದರೂ ಅವರು ನಮ್ಮ ಧೀಮಂತ ನಾಯಕರು: ಬಸನಗೌಡ ಪಾಟೀಲ್ ಯತ್ನಾಳ್

Arun Kumar Belly

|

Updated on:Feb 24, 2023 | 4:53 PM

ತಮ್ಮ ಹಾಗೂ ಯಡಿಯೂರಪ್ಪನವರ ನಡುವೆ ವೈಮನಸ್ಸುಗಳಿರಬಹುದು ಆದರೆ ಅವರು ನಮ್ಮ ನಾಯಕ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ ಎಂದು ಯತ್ನಾಳ್ ಹೇಳಿದರು.

ಬೆಂಗಳೂರು: ಸದನದ ಹೊರಗಡೆ ಸದಾ ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಬಿವೈ ವಿಜಯೇಂದ್ರರನ್ನು ಟೀಕಿಸುತ್ತಾ ಖಂಡಿಸುತ್ತಿದ್ದ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿಧಾನಸಭಾ ಅಧಿವೇಶನದ ಕೊನೆಯ ದಿನವಾದ ಇಂದು ಸದನದಲ್ಲಿ ಹಿರಿಯ ನಾಯಕನ ಬಗ್ಗೆ ಬಹಳ ಗೌರವದಿಂದ ಮಾತಾಡಿದರು. ತಮ್ಮ ಹಾಗೂ ಯಡಿಯೂರಪ್ಪನವರ ನಡುವೆ ವೈಮನಸ್ಸುಗಳಿರಬಹುದು ಆದರೆ ಅವರು ನಮ್ಮ ನಾಯಕ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ ಮತ್ತು ದಿವಂಗತ ಅನಂತಕುಮಾರ್ (Late Anant Kumar)  ಎಂದು ಯತ್ನಾಳ್ ಹೇಳಿದರು. ಅವರ ನೆರವು, ಸಲಹೆ ಮತ್ತು ಮಾರ್ಗದರ್ಶನದಿಂದಾಗೇ ದೇಶದ ಅಗ್ರಮಾನ್ಯ ನಾಯಕರಲ್ಲೊಬ್ಬರಾದ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಮಂತ್ರಿಯಾಗುವ ಸೌಭಾಗ್ಯ ತನಗೆ ಪ್ರಾಪ್ತವಾಯಿತು ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada