ದಾವಣಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಲೇ ಬೇಕು, ಸಿದ್ದೇಶ್ವರ ಗೂಂಡಾಗಿರಿ ನಡೆಯಲ್ಲ: ಎಂಪಿ ರೇಣುಕಾಚಾರ್ಯ
ಪತ್ರಿಕಾ ಗೋಷ್ಟಿಯನ್ನು ನಡೆಸಿ ಪಕ್ಷದ ಕಾರ್ಯಕರ್ತನನ್ನು ಮಂಗ್ಯಾ ಅನ್ನುತ್ತಾರೆ ಮತ್ತು ತನ್ನನ್ನು ಹಲ್ಕಟ್ ಅಂತಾರೆ, ಇಂಥ ಗೂಂಡಾಗಿರಿಯೆಲ್ಲ ತಮ್ಮ ಮೇಲೆ ನಡೆಯಲ್ಲ, ತಮಗೂ ಅದು ಮಾಡೋದು ಗೊತ್ತು ಎಂದು ಹೇಳಿದ ರೇಣುಕಾಚಾರ್ಯ ಚಿಕ್ಕಂದಿನಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದೇವೆ ಮತ್ತು ಬೆವರು ಹರಿಸಿದ್ದೇವೆ ಎಂದು ಹೇಳಿದರು.
ದಾವಣಗೆರೆ: ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ರೊಚ್ಚಿಗೆದ್ದಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ (Davanagere Lok Sabha constituency) ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು, ಅದರೆ ಪಕ್ಷದ ವರಿಷ್ಠರು ಅದನ್ನು ಹಾಲಿ ಸಂಸದ ಜಿಎಂ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ನೀಡಿದ್ದಾರೆ. ಗಾಯತ್ರಿ ಅವರಿಗೆ ನೀಡಿರುವ ಟಕೆಟ್ ರದ್ದು ಮಾಡಿ ತನಗೆ ನೀಡಬೇಕು ಎಂದು ರೇಣುಕಾಚಾರ್ಯ ಇಂದು ನಗರದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡುವಾಗ ಹೇಳಿದರು. ತನ್ನ ಮತ್ತು ಸಿದ್ದೇಶ್ವರ ಪರ ನಡೆದ ಎರಡು ಸರ್ವೇಗಳನ್ನು ವರಿಷ್ಠರು ನೋಡಿದ್ದಾರೆ, ರೇಣುಕಾಚಾರ್ಯನೇ ಪರ್ಯಾಯ ಅಭ್ಯರ್ಥಿ ಎಂದು ಖುದ್ದು ಸಿದ್ದೇಶ್ವರ್ ಹೇಳಿದ್ದಾರೆ, ನಂತರ ರಾಷ್ಟ್ರೀಯ ನಾಯಕರಿಗೆ ತಪ್ಪು ಮಾಹಿತಿ ನೀಡಿ ತನ್ನ ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ಆರ್ಥಿಕವಾಗಿ ಸದೃಢರಾಗಿರುವ ಕಾರಣ ಅವರ ದರ್ಬಾರು ನಡೆಯಬೇಕೇ? ಪತ್ರಿಕಾ ಗೋಷ್ಟಿಯನ್ನು ನಡೆಸಿ ಪಕ್ಷದ ಕಾರ್ಯಕರ್ತನನ್ನು ಮಂಗ್ಯಾ ಅನ್ನುತ್ತಾರೆ ಮತ್ತು ತನ್ನನ್ನು ಹಲ್ಕಟ್ ಅಂತಾರೆ, ಇಂಥ ಗೂಂಡಾಗಿರಿಯೆಲ್ಲ ತಮ್ಮ ಮೇಲೆ ನಡೆಯಲ್ಲ, ತಮಗೂ ಅದು ಮಾಡೋದು ಗೊತ್ತು ಎಂದು ಹೇಳಿದ ರೇಣುಕಾಚಾರ್ಯ ಚಿಕ್ಕಂದಿನಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದೇವೆ ಮತ್ತು ಬೆವರು ಹರಿಸಿದ್ದೇವೆ ಎಂದು ಹೇಳಿದರು. ಯಡಿಯೂರಪ್ಪನವರ ಜೊತೆ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳಿದ್ದಿದ್ದು ನಿಜ, ಅದನ್ನು ಬಗೆ ಹರಿಸಿಕೊಂಡಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ