ನನ್ನ ಭಿಕ್ಷೆಯಿಂದ ವಿಜಯೇಂದ್ರ ಅಸೆಂಬ್ಲಿ ಚುನಾವಣೆ ಗೆದ್ದಿದ್ದು ಅಂತ ಶಿವಕುಮಾರ್ ಹೇಳಿದ್ದಾರೆ: ಈಶ್ವರಪ್ಪ
ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿದ್ದ ಈಶ್ವರಪ್ಪ ಈಗ ತಾನು ಖಚಿತವಾಗಿ ಸೋಲುತ್ತೇನೆ ಅಂತ ಗೊತ್ತಿತ್ತು, ಪಕ್ಷದ ಶುದ್ಧೀಕರಣ ಆಗಲಿ ಎಂಬ ಉದ್ದೇಶದಿಂದ ಸ್ಪರ್ಧಿಸಿದ್ದೆ, ಪಕ್ಷದಿಂದ ತನ್ನನ್ನು ಉಚ್ಛಾಟಿಸುತ್ತಾರೆ ಎಂಬ ವಿಷಯವೂ ಗೊತ್ತಿತ್ತು ಎಂದು ಹೇಳುತ್ತಾರೆ.
ವಿಜಯಪುರ: ನಗರದಲ್ಲಿ ಇಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಹರಿಹಾಯ್ದರು. ಯಾರೋ ಆಡಿದ ಮಾತಿಗೆ ಉತ್ತರಿಸುವ ಅಗತ್ಯ ತನಗಿಲ್ಲ ಎಂದ ಈಶ್ವರಪ್ಪ, ನಾನು ನೀಡಿದ ಭಿಕ್ಷೆಯಿಂದ ವಿಜಯೇಂದ್ರ ಎರಡು ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾನೆ ಎಂದು ಡಿಕೆ ಶಿವಕುಮಾರ್ ಸಾರ್ವಜನಿಕವಾಗಿ ಹೇಳಿದ್ದಾರೆ, ಇದಕ್ಕಿಂತ ದೊಡ್ಡ ಆವಮಾನ ಪಕ್ಷದ ಒಬ್ಬ ರಾಜ್ಯಾಧ್ಯಕ್ಷನಿಗೆ ಬೇಕೇ? ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಿಂದೂ ಸಮಾಜದಲ್ಲಿ ಹಿಂದುಳಿದವರಿಗೆ, ದಲಿತರಿಗೆ ಬೆಂಬಲ ಸಿಗುತ್ತಿಲ್ಲ: ಈಶ್ವರಪ್ಪ ಬೇಸರ