AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ರಿಲೀಸ್​ಗೂ ಮೊದಲೂ ದರ್ಶನ್ ಆಶೀರ್ವಾದ ಪಡೆಯುತ್ತೇನೆ; ಝೈದ್ ಖಾನ್

ಸಿನಿಮಾ ರಿಲೀಸ್​ಗೂ ಮೊದಲೂ ದರ್ಶನ್ ಆಶೀರ್ವಾದ ಪಡೆಯುತ್ತೇನೆ; ಝೈದ್ ಖಾನ್

ರಾಜೇಶ್ ದುಗ್ಗುಮನೆ
|

Updated on: Dec 06, 2025 | 10:59 AM

Share

ನಟ ಝೈದ್ ಖಾನ್ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ನಟನೆಯ ಮುಂದಿನ ಚಿತ್ರ ‘ಕಲ್ಟ್’ ಮುಂದಿನ ವರ್ಷ ಜನವರಿ 23ರಂದು ರಿಲೀಸ್ ಆಗಲಿದೆ. ಈ ವೇಳೆ ಅವರು ಕೆಲವು ವಿಷಯಗಳನ್ನು ಮಾತನಾಡಿದ್ದಾರೆ. ಮುಖ್ಯವಾಗಿ ದರ್ಶನ್ ವಿಷಯವನ್ನು ಅವರು ಪ್ರಸ್ತಾಪ ಮಾಡಿದ್ದಾರೆ.

ನಟ ಝೈದ್ ಖಾನ್ ಅವರ ನಟನೆಯ ‘ಕಲ್ಟ್’ ಸಿನಿಮಾ ಮುಂದಿನ ವರ್ಷ ಜನವರಿ 23ರಂದು ತೆರೆಗೆ ಬರಲಿದೆ. ಈ ಸಿನಿಮಾ ಬಗ್ಗೆ ಮಾತನಾಡುವಾಗ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ‘ನನಗೆ ಅಣ್ಣ ಅಂತ ಯಾರೂ ಇಲ್ಲ. ಆದರೆ, ದರ್ಶನ್ ಆ ಸ್ಥಾನ ತುಂಬಿದ್ದಾರೆ. ನನ್ನ ಸಿನಿಮಾ ರಿಲೀಸ್​ಗೂ ಮೊದಲು ಅವರು ಜೈಲಿನಿಂದ ಹೊರ ಬರುತ್ತಾರೆ ಎನ್ನುವ ನಂಬಿಕೆ ಇದೆ. ಬರದೇ ಇದ್ದರೆ ನಾನೇ ಹೋಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬರುತ್ತೇನೆ’ ಎಂದಿದ್ದಾರೆ ಝೈದ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.