ನನ್ನ ತಂದೆಯ ಸವಾಲನ್ನು ಯತ್ನಾಳ್ ಸ್ವೀಕರಿಸಲಿಲ್ಲವೆಂದು ನನ್ನ ಮಕ್ಕಳಿಗೆ ಹೇಳುತ್ತೇನೆ: ಶಿವಾನಂದ ಪಾಟೀಲ್ ಮಗ

ಅರುಣ್​ ಕುಮಾರ್​ ಬೆಳ್ಳಿ

Updated on: May 03, 2025 | 8:33 PM

ತನ್ನ ತಂದೆ ಮತ್ತು ತಾತ ವಿಜಯಪುರ ನಗರಸಭಾಧ್ಯಕ್ಷರಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ, ನಗರದ ಎಲ್​ಬಿಎಸ್ ಮಾರ್ಕೆಟ್ ತನ್ನ ತಂದೆ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಅಸ್ತಿತ್ವಕ್ಕೆ ಬಂದಿತ್ತು, ಇಲ್ಲಿ ನಿರುದ್ಯೋಗದ ಸಮಸ್ಯೆ ಬಹಳ ಇದೆ, ಅದರೆ ಬಸನಗೌಡ ಯತ್ನಾಳ್ ಅವರು ತಮ್ಮ ಸಕ್ಕರೆ ಕಾರ್ಖಾನೆಯನ್ನು ಕಲಬುರಗಿಯ ಚಿಂಚೋಳಿಯಲ್ಲಿ ಯಾಕೆ ಸ್ಥಾಪಿಸಿದರು? ಶಾಸಕನಾಗಿ ವಿಜಯಪುರಕ್ಕೆ ಅವರ ಕೊಡುಗೆ ಏನು ಶಿವಾನಂದ ಪಾಟೀಲ್ ಪುತ್ರ ಪ್ರಶ್ನಿಸಿದರು.

ವಿಜಯಪುರ, ಮೇ3: ಶಿವಾನಂದ ಪಾಟೀಲ್ ನಂತರ ಅವರ ಮಗನೂ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸವಾಲು ಹಾಕುತ್ತಿದ್ದಾರೆ. ಇಂದು ವಿಜಯಪುರ ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಅವರು, ನನ್ನ ತಂದೆಯವರು ಷರತ್ತುಬದ್ಧ ರಾಜೀನಾಮೆ ಪತ್ರ  (conditional resignation letter) ಸಲ್ಲಿಸಿದ್ದಾರೆ, ಒಂದು ಪಕ್ಷ ರಾಜೀನಾಮೆ ಪತ್ರದಲ್ಲಿರುವ ಸಾರಾಂಶ ಸರಿಯಿಲ್ಲ ಅಂತ ಯತ್ನಾಳ್ ಅವರು ಅನ್ನೋದಾದ್ರೆ ಪತ್ರವನ್ನು ಅವರೇ ಡ್ರಾಫ್ಟ್ ಮಾಡಲಿ, ತಂದೆ ಅದನ್ನು ನಕಲು ಮಾಡಿ ಮತ್ತೊಂದು ಪತ್ರವನ್ನು ಸ್ಪೀಕರ್ ಅವರಿಗೆ ಸಲ್ಲಿಸುತ್ತಾರೆ, ಅವರೊಂದಿಗೆ ಯತ್ನಾಳ್ ಕೂಡ ರಾಜೀನಾಮೆ ಸಲ್ಲಿಸಲಿ, ಅವರು ನನ್ನ ತಂದೆಯ ಸವಾಲು ಸ್ವೀಕರಿಸದಿದ್ದರೆ ನಾನು ನನ್ನ ಮಕ್ಕಳಿಗೆ ನನ್ನ ತಂದೆಯ ಕತೆ ಹೇಳಬೇಕಾಗುತ್ತದೆ, ತಂದೆ ಇಂಥ ವ್ಯಕ್ತಿಗೆ ಸವಾಲು ಹಾಕಿದ್ದರು, ಆದರೆ ಆ ವ್ಯಕ್ತಿ ಸವಾಲು ಸ್ವೀಕರಿಸಲಿಲ್ಲ ಎಂದು ಹೇಳುತ್ತೇನೆ ಎಂದರು.

ಇದನ್ನೂ ಓದಿ: ಯತ್ನಾಳ್ ಸವಾಲನ್ನು ಶಿವಾನಂದ ಸ್ವೀಕರಿಸಿದ್ದಾರೆ, ಈಗ ವಿಜಯಪುರ ಶಾಸಕನ ಸರದಿ: ಜಮೀರ್ ಅಹ್ಮದ್, ಸಚಿವ  

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.