‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು

Updated on: Dec 29, 2025 | 11:45 AM

Malu Nipanal Elimination: ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಮಾಳು ಅವರು ಈಗ ಚರ್ಚೆಯಲ್ಲಿ ಇದ್ದಾರೆ. ಮನೆಯವರ ಜೊತೆ ಇಡೀ ಉತ್ತರ ಕರ್ನಾಟಕ ಅಳುತ್ತಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಅವರ ಹೇಳಿಕೆ ಚರ್ಚೆಯನ್ನು ಹುಟ್ಟುಹಾಕಿದೆ. ಆ ಬಗ್ಗೆ ಇಲ್ಲಿದೆ ವಿವರ.

ಮಾಳು ನಿಪನಾಳ್ ಅವರು ಬಿಗ್ ಬಾಸ್ ಅಲ್ಲಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಎರಡು ವಾರ ಮಾತ್ರ ಇರಬಹುದು ಎಂಬುದು ಅವರ ಊಹೆ ಆಗಿತ್ತು. ಆದರೆ, ಅವರು 90 ದಿನ ಇದ್ದರು. ‘ಇಷ್ಟು ದಿನ ಜನರು ವೋಟ್ ಹಾಕಿ ಉಳಿಸಿದ್ದಾರೆ. ನಾನು ಫಿನಾಲೆವರೆಗೆ ಇದ್ದು ಕಪ್ ಗೆಲ್ಲಬೇಕಿತ್ತು. ನಾನು ಹೊರ ಬಂದಿದ್ದಕ್ಕೆ ಇಡೀ ಉತ್ತರ ಕರ್ನಾಟಕ ಅಳುತ್ತಿದೆ. ಈ ಬಾರಿ ಯಾರೇ ವಿನ್ ಆದರೂ ಅದನ್ನು ನಾನು ಒಪ್ಪಲ್ಲ’ ಎಂದು ಮಾಳು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More