Kalaburagi; ಬೇರೆಯವರಂತೆ ಕೈಕಾಲು ಹಿಡಿದಿದ್ದರೆ ಯಾವತ್ತೋ ಮುಖ್ಯಮಂತ್ರಿಯಾಗಿರುತ್ತಿದ್ದೆ: ಬಸನಗೌಡ ಪಾಟೀಲ್ ಯತ್ನಾಳ್

Arun Kumar Belly

|

Updated on: Feb 28, 2023 | 10:14 AM

ಅಮೇಲೆ ಅವರು ನನಗೆ ಮಂತ್ರಿ, ಮುಖ್ಯಮಂತ್ರಿಯಾಗುವ ಆಸೆಯಿಲ್ಲ, ಬೇರೆಯವರ ಏಳ್ಗೆಯನ್ನು ನೋಡಿ ಸಂತೋಷ ಪಡುತ್ತೇನೆ ಅನ್ನುತ್ತಾರೆ.

ಕಲಬುರಗಿ: ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ನೇರವಂತಿಕೆಯ ಮಾತಾಡುತ್ತಾರೋ ಅಥವಾ ಹಾಗೆ ತೋರಿಸಿಕೊಳ್ಳುತ್ತಾರೋ ಗೊತ್ತಾಗದು. ಯಾಕೆ ಗೊತ್ತಾ? ಒಮ್ಮೆ ಬೆಂಗಳೂರಲ್ಲಿ ಮಾತಾಡುವಾಗ ನನಗೆ ಮಂತ್ರಿ ಪದವಿಯಿಂದ (ministerial berth) ವಂಚಿಸಲಾಯಿತು ಅನ್ನುತ್ತಾರೆ. ಇವತ್ತು ಕಲಬುರಗಿಯಲ್ಲಿ (Kalaburagi) ಮಾತಾಡುವಾಗ ಬೇರೆಯವರ ಹಾಗೆ ನಾನೂ ಕೈಕಾಲು ಹಿಡಿದಿದ್ದರೆ ಯಾವತ್ತೋ ಮುಖ್ಯಮಂತ್ರಿಯಾಗುತ್ತಿದ್ದೆ ಅನ್ನುತ್ತಾರೆ. ಅಮೇಲೆ ಅವರು ನನಗೆ ಮಂತ್ರಿ, ಮುಖ್ಯಮಂತ್ರಿಯಾಗುವ ಆಸೆಯಿಲ್ಲ, ಬೇರೆಯವರ ಏಳ್ಗೆಯನ್ನು ನೋಡಿ ಸಂತೋಷ ಪಡುತ್ತೇನೆ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada