ತಾಯಿ ಪಕ್ಕದಲ್ಲೇ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ: ಇಲ್ಲಿದೆ IAS ಅಧಿಕಾರಿಯ ಅಂತಿಮ ದರ್ಶನದ ಮಾಹಿತಿ

Updated on: Nov 25, 2025 | 11:16 PM

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟೆಯ ಮಹಾಂತೇಶ್ ಬೀಳಗಿ, ಬಾಲ್ಯದಲ್ಲಿ ಒಂದು ಹೊತ್ತು ಊಟಕ್ಕೂ ಪರದಾಡಿದ್ದರು. ಸಣ್ಣ ಕೆಲಸಗಳನ್ನು ಮಾಡುತ್ತಾ ವಿದ್ಯಾಭ್ಯಾಸ ಪೂರೈಸಿದ ಬೀಳಗಿ, ರಾಜ್ಯವೇ ಮೆಚ್ಚುವ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು. ಇನ್ನು ನಾಳೆ (ನವೆಂಬರ್ 26) ರಾಮದುರ್ಗದ ತೋಟದಲ್ಲೇ ತಾಯಿ ಸಮಾಧಿ ಪಕ್ಕದಲ್ಲಿ ಮಹಾಂತೇಶ್ ಬೀಳಗಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಬೆಳಗಾವಿ (ನವೆಂಬರ್.25) ಐಎಸ್ ಅಧಿಕಾರಿ , ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸರಳ ಹಾಗೂ ಸಜ್ಜನಿಕೆಯ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಕುಟುಂಬಸ್ಥರ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಲಬರುಗಿಯ ಜೇವರ್ಗಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಮೃತಪಟ್ಟಿದ್ದಾರೆ. ಕಡು ಬಡತನದಲ್ಲಿ ಬೆಳೆದ ಮಹಾಂತೇಶ್ ಬೀಳಗಿ ಉನ್ನತ ಸ್ಥಾನಕ್ಕೇರಿದ ಮಾದರಿ ವ್ಯಕ್ತಿತ್ವ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟೆಯ ಮಹಾಂತೇಶ್ ಬೀಳಗಿ, ಬಾಲ್ಯದಲ್ಲಿ ಒಂದು ಹೊತ್ತು ಊಟಕ್ಕೂ ಪರದಾಡಿದ್ದರು. ಸಣ್ಣ ಕೆಲಸಗಳನ್ನು ಮಾಡುತ್ತಾ ವಿದ್ಯಾಭ್ಯಾಸ ಪೂರೈಸಿದ ಬೀಳಗಿ, ರಾಜ್ಯವೇ ಮೆಚ್ಚುವ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು. ಇನ್ನು ನಾಳೆ (ನವೆಂಬರ್ 26) ರಾಮದುರ್ಗದ ತೋಟದಲ್ಲೇ ತಾಯಿ ಸಮಾಧಿ ಪಕ್ಕದಲ್ಲಿ ಮಹಾಂತೇಶ್ ಬೀಳಗಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.