ಅರವಿಂದ್​ ಸೋಲಿಗೆ ದಿವ್ಯಾ ಕಾರಣ? ಉರುಡುಗ ತಲೆಯಲ್ಲಿ ಹೀಗೊಂದು ಪ್ರಶ್ನೆ

| Updated By: ರಾಜೇಶ್ ದುಗ್ಗುಮನೆ

Updated on: Aug 12, 2021 | 11:48 AM

ಬಿಗ್​ ಬಾಸ್​ ವೇದಿಕೆ ಮೇಲೆ ಸುದೀಪ್​ ಅವರ ಒಂದು ಪಕ್ಕದಲ್ಲಿ ಅರವಿಂದ್​ ಹಾಗೂ ಮತ್ತೊಂದು ಕಡೆ ತಾವು ನಿಲ್ಲಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ.

ದಿವ್ಯಾ ಉರುಡುಗ ಅವರು ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆಯಲ್ಲಿ ಎರಡನೇ ರನ್ನರ್​ ಅಪ್​ ಆಗಿ ಹೊರಹೊಮ್ಮಿದ್ದಾರೆ. ಬಿಗ್​ ಬಾಸ್​ ವೇದಿಕೆ ಮೇಲೆ ಸುದೀಪ್​ ಅವರ ಒಂದು ಪಕ್ಕದಲ್ಲಿ ಅರವಿಂದ್​ ಹಾಗೂ ಮತ್ತೊಂದು ಕಡೆ ತಾವು ನಿಲ್ಲಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಈ ಬಗ್ಗೆ ಅವರಿಗೆ ಬೇಸರ ಉಂಟಾಗಿದೆ. ಈ ಮಧ್ಯೆ ಅರವಿಂದ್​ ಸೋಲಿಗೆ ತಾವು ಕಾರಣವೇ ಎನ್ನುವ ಅನುಮಾನ ಬಂದಿದೆ.

ಅರವಿಂದ್​ ಹಾಗೂ ಬಿಗ್​ ಬಾಸ್​ ವಿನ್ನರ್​ ಮಂಜು ನಡುವಿನ ಮತಗಳ ಅಂತರ ತುಂಬಾನೇ ಕಡಿಮೆ. ಒಂದೊಮ್ಮೆ ದಿವ್ಯಾ ಉರುಡುಗ ಟಾಪ್​ ಪೈವ್​ನಲ್ಲಿ ಇಲ್ಲದೆ ಇದ್ದಿದ್ದರೆ ಅವರ ಮತಗಳು ಅರವಿಂದ್​ಗೆ ಬೀಳುತ್ತಿತ್ತು ಎನ್ನುವ ಮಾತಿದೆ. ಇದು ದಿವ್ಯಾಗೂ ಹೌದು ಎನಿಸಿದೆ. ಟಿವಿ9 ಕನ್ನಡದ ಜತೆ ನಡೆದ ಸಂದರ್ಶನದಲ್ಲಿ ಈ ಮಾತನ್ನು ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ‘ಮಂಜು ಹೇಳಿದ ಆ ಮಾತನ್ನು ನಾನು ಎಂದಿಗೂ ಒಪ್ಪಿಕೊಳ್ಳಲ್ಲ’; ದಿವ್ಯಾ ಉರುಡುಗ

Published on: Aug 12, 2021 11:48 AM