ಆಡಳಿತ ಪಕ್ಷದ ಶಾಸಕ ಸ್ಥಿತಿಯೇ ಹೀಗಾದರೆ ಉಳಿದವರ ಗತಿಯೇನು ಅಂತ ಸಿದ್ದರಾಮಯ್ಯ ರೇಣುಕಾಚಾರ್ಯರನ್ನು ಪ್ರಶ್ನಿಸಿದರು
ರೇಣುಕಾಚಾರ್ಯ ಎಲ್ಲವನ್ನೂ ವಿವರಿಸಿದ ಬಳಿಕ ಸಿದ್ದರಾಮಯ್ಯ, ನಿನ್ನಂಥವನ ಸ್ಥಿತಿಯೇ ಹೀಗಾದರೆ ಬೇರೆಯವರ ಗತಿಯೇನು? ಎಂದರು.
ಬೆಳಗಾವಿ: ಹೊನ್ನಾಳಿ ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya), ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು (Siddaramaiah) ಎಷ್ಟೇ ಟೀಕಿಸಿದರೂ ಅವರ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ಬೆಳಗಾವಿಯಲ್ಲಿ (Belagavi) ಗುರುವಾರ ಇಬ್ಬರು ನಾಯಕರು ಆಕಸ್ಮಿಕವಾಗಿ ಮುಖಾಮುಖಿಯಾದಾಗ ಸಿದ್ದರಾಮಯ್ಯ ಅವರು ಶಾಸಕರ ಸಹೋದರನ ಮಗ ಚಂದ್ರಶೇಖರ್ ದಾರುಣ ಸಾವಿನ ಬಗ್ಗೆ ವಿಚಾರಿಸಿದರು. ರೇಣುಕಾಚಾರ್ಯ ಎಲ್ಲವನ್ನೂ ವಿವರಿಸಿದ ಬಳಿಕ ಸಿದ್ದರಾಮಯ್ಯ, ನಿನ್ನಂಥವನ ಸ್ಥಿತಿಯೇ ಹೀಗಾದರೆ ಬೇರೆಯವರ ಗತಿಯೇನು? ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ