Loading video

ರಾಜಣ್ಣಗೆ ಸಮಸ್ಯೆಗಳಿದ್ದರೆ ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಲಿ:ಸತೀಶ್ ಜಾರಕಿಹೊಳಿ, ಸಚಿವ

|

Updated on: Feb 17, 2025 | 4:10 PM

ರಾಜಣ್ಣ ಅವರಿಗೆ ಯಾರ ಮೇಲೂ ಸಿಟ್ಟಿಲ್ಲ, ಅವರ ಮಾತಾಡುವ ರೀತೀನೇ ಹಾಗೆ ಎಂದು ಹೇಳಿದ ಜಾರಕಿಹೊಳಿ ಅವರೇನು ಹೇಳಿದ್ದಾರೆ ಅಂತ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ, ಅವರು ಹೇಳಿದ್ದೊಂದು ತಾನು ಹೇಳೋದು ಮತ್ತೊಂದು ಆಗಬಾರದು. ಸಚಿವನ ಮಾತು ಕೇಳುತ್ತಿದ್ದರೆ ಪ್ರಾಯಶಃ ಅವರೊಬ್ಬರೇ ಮಲ್ಲಿಕರ್ಜುನ ಖರ್ಗೆ ಅವರ ಡಿಕ್ಟ್ಯಾಟ್ ಅನ್ನು ಅನೂಚಾನಾಗಿ ಪಾಲಿಸುತ್ತಿದ್ದಾರೆ ಎಂದೆನಿಸದೆ ಇರದು.

ಉಡುಪಿ: ಸಚಿವ ಸತೀಶ್ ಜಾರಕಿಹೊಳಿ ತಮ್ಮ ಪಕ್ಷದ ನಾಯಕರ ಅಸಮಾಧಾನವಿದ್ದರೂ ಸಾರ್ವಜನಿಕವಾಗಿ ಅದನ್ನು ತೋರಿಸಿಕೊಳ್ಳಲ್ಲ ಮತ್ತು ಉಗ್ರವಾದ ಪ್ರತಿಕ್ರಿಯೆಯನ್ನೂ ನೀಡಲ್ಲ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಇಂದು ಬೆಂಗಳೂರಲ್ಲಿ ಸಹಕಾರ ಸಚಿವ ಆಡಿರುವ ಮಾತುಗಳಿಗೆ ಮೃದುವಾದ ಶಬ್ದಗಳಲ್ಲಿ ಪ್ರತಿಕ್ರಿಯೆ ನೀಡಿದರು. ರಾಜಣ್ಣಗೆ ಏನಾದರೂ ಸಮಸ್ಯೆಯಿದ್ದರೆ ಪಕ್ಷದ ಚೌಕಟ್ಟಿನೊಳಗೆ ಮಾತಾಡಬೇಕು ಮತ್ತು ಪರಿಹರಿಸಿಕೊಳ್ಳಬೇಕು, ಅವರ ಹೇಳಿಕೆಗೆ ತಾನು ಉಡುಪಿ, ಮಂಗಳೂರಲ್ಲಿ ಕೂತು ಮಾತಾಡಿದರೆ ಪರಿಹಾರ ಸಿಗಲಾರದು ಎಂದು ಲೋಕೋಪಯೋಗಿ ಸಚಿವ ಹೇಳಿದರು. ಪಕ್ಷದಲ್ಲಿ ನಾಯಕರ ನಡುವೆ ಯಾವ ಸಮಸ್ಯೆಯೂ ಇಲ್ಲ, ಇದ್ದರೆ ಮಾಧ್ಯಮದವರ ಗಮನಕ್ಕೆ ತರಲಾಗುವುದು ಎಂದು ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದೆಹಲಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಗಂಟೆಗಟ್ಟಲೆ ಮಾತುಕತೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ