ಅಧಿಕಾರಿಗಳು ನನ್ನನ್ನು ಬ್ಲ್ಯಾಕ್ಮೇಲ್ ಮಾಡುವ ಪ್ರಯತ್ನದಲ್ಲಿದ್ದರೆ ಅವರು ತಮ್ಮ ಹಾಳು ಮಾಡಿಕೊಳ್ಳುತ್ತಿದ್ದಾರೆ: ಸಾ ರಾ ಮಹೇಶ್
ಎಲ್ಲ ರಾಜಕಾರಣಿಗಳು ಮತ್ತು ಅಧಿಕಾರಿಗಳು ಪ್ರಾಮಾಣಿಕರಾಗಿರುವುದಿಲ್ಲ ಎನ್ನುವ ಮಹೇಶ್ ತಾವು ಶಾಸಕರಾಗಿದ್ದ 13 ವರ್ಷಗಳಲ್ಲಿ ಮತ್ತು ಒಂದು ವರ್ಷ ಎರಡು ತಿಂಗಳು ಸಚಿವನಾಗಿದ್ದ ಅವಧಿಯಲ್ಲಿ ವರ್ಗಾವಣೆ ದಂಧೆ ನಡೆಸಿಲ್ಲ ಮತ್ತು ಯಾವುದೇ ಕಂಟ್ರ್ಯಾಕ್ಟರ್ನಿಂದ ಕಿಕ್ ಬ್ಯಾಕ್ ಪಡೆದಿಲ್ಲ ಎಂದು ಹೇಳಿದರು.
ಶಾಸಕ ಸಾರಾ ಮಹೇಶ್ ಅವರು ಸೋಮವಾರ ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ವಿರುದ್ಧ ಕ್ಷರಶಃ ಗುಡುಗುತ್ತಿದ್ದರು. ತಮಗೆ ಸೇರಿದ ಭೂಮಿಗಳ ಪುನರ್ ಸರ್ವೇ ಮಾಡಿಸಬೇಕೆಂದು ಹೇಳಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮುನೀಷ್ ಮುದ್ಗೀಲ್ ಅವರ ವಿರುದ್ಧ ಕಿಡಿಕಾರುತ್ತಿದ್ದರು. ಅವರು ಸರ್ವೇ ನಡೆಸಲು ಮುಕ್ತರೆಂದು ಹೇಳಿದ ಶಾಸಕರು ಅವರು ಸರ್ವೇ ನಡೆಸಬೇಕೆಂದಿರುವ ಜಮೀನು ತನಗೆ ಸೇರಿದ್ದಲ್ಲ ಅಂತ ಮೊದಲಿನಿಂದಲೂ ತಾವು ಹೇಳುತ್ತಿರುವುದರಿಂದ ತನಗೆ ಸೇರಿದ ಜಮೀನು ಮಾತ್ರ ತನಗೆ ನೀಡಿ ಉಳಿದದ್ದನ್ನು ಅವರೇ ಇಟ್ಟುಕೊಳ್ಳಲಿ ಎಂದು ಹೇಳಿದರು. ಸರ್ವೇ ನಡೆಸುವುದಾಗಿ ಹೇಳಿ ರೋಹಿಣಿ ಮತ್ತು ಮುದ್ಗೀಲ್ ತಮ್ಮನ್ನು ಬ್ಲ್ಯಾಕ್ಮೇಲ್ ಮಾಡುವ ಪ್ರಯತ್ನ ಮಾಡುತ್ತಿದ್ದರೆ ಅವರು ವ್ಯರ್ಥ ಶ್ರಮಪಡುತ್ತಿದ್ದಾರೆ ಎಂದು ಮಹೇಶ್ ಹೇಳಿದರು.
ಎಲ್ಲ ರಾಜಕಾರಣಿಗಳು ಮತ್ತು ಅಧಿಕಾರಿಗಳು ಪ್ರಾಮಾಣಿಕರಾಗಿರುವುದಿಲ್ಲ ಎನ್ನುವ ಮಹೇಶ್ ತಾವು ಶಾಸಕರಾಗಿದ್ದ 13 ವರ್ಷಗಳಲ್ಲಿ ಮತ್ತು ಒಂದು ವರ್ಷ ಎರಡು ತಿಂಗಳು ಸಚಿವನಾಗಿದ್ದ ಅವಧಿಯಲ್ಲಿ ವರ್ಗಾವಣೆ ದಂಧೆ ನಡೆಸಿಲ್ಲ ಮತ್ತು ಯಾವುದೇ ಕಂಟ್ರ್ಯಾಕ್ಟರ್ನಿಂದ ಕಿಕ್ ಬ್ಯಾಕ್ ಪಡೆದಿಲ್ಲ ಎಂದು ಹೇಳಿದರು. ಒಂದು ಪಕ್ಷ ತಾನು ಲಂಚ ತೆಗೆದುಕೊಂಡಿದ್ದೇನೆ ಅಂತ ಪ್ರೂವ್ ಮಾಡಿದರೆ, ರಾಜಕೀಯದಿಂದ ನಿವೃತ್ತನಾಗುವ ಬಗ್ಗೆ ತಾನು ಹಿಂದೆ ಹೇಳಿದ ಮಾತಿಗೆ ಬದ್ಧನಾಗಿರುವುದಾಗಿ ಹೇಳಿದರು. ತಮ್ಮ ಹೋರಾಟ ಇನ್ನೂ ನಿಂತಿಲ್ಲ ಅದನ್ನು ವಿಧಾನ ಸೌಧದಲ್ಲೂ ಮುಂದುವರಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ, ಸರ್ಕಾರೀ ಅಧಿಕಾರಿಗಳು ನಿವೃತ್ತರಾಗುವ ಹೊತ್ತಿಗೆ ರೂ 1,000 ಕೋಟಿ ರೂ. 500 ಕೋಟಿಗೆ ಬಾಳುತ್ತಾರೆ, ಅವರಿಗೆ ಆ ಹಣ ಎಲ್ಲಿಂದ ಬರುತ್ತದೆ ಎಂದು ಶಾಸಕರು ಪ್ರಶ್ನಿಸಿದರು.
ಇದನ್ನೂ ಓದಿ: Viral Video: ಬಾಲಕಿಯ ಸ್ಟಂಟ್ ನೋಡಿ ಮೂಳೆ ಇದೆಯೋ? ಇಲ್ಲವೋ ಎಂದು ಪ್ರಶ್ನಿಸಿದ ನೆಟ್ಟಿಗರು; ವಿಡಿಯೋ ನೋಡಿ