Bengaluru; ತಮ್ಮ ಮೊದಲ ಅವಧಿಯ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತ ಹೇಳುವ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

|

Updated on: Jul 14, 2023 | 5:51 PM

ಸಿದ್ದರಾಮಯ್ಯನವರಿಗೆ ಅಷ್ಟೆಲ್ಲ ವಿಶ್ವಾಸವಿರೋದಾದರೆ, ತಮ್ಮ ಆಡಳಿತಾವಧಿಯನ್ನೂ ತನಿಖೆಗೆ ಒಪ್ಪಿಸಲಿ ಎಂದು ಬೊಮ್ಮಾಯಿ ಹೇಳಿದರು.

ಬೆಂಗಳೂರು: ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಅಂತ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಯಿ (Basavaraj Bommai) ಹೇಳಿದರು. ವಿಧಾನ ಸೌಧ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಅವರು ಹೇಳೋದೇ ನಿಜವಾಗಿದ್ದರೆ, ಅ ಅವಧಿಯಲ್ಲಿ ಸಮಿತಿಗಳನ್ನು ರಚಿಸಿ ನ್ಯಾಯಾಂಗ ತನಿಖೆ (judicial enquiry) ನಡೆಸಿದ್ದು ಯಾಕೆ? ಅಸಲಿಗೆ ಅವರ ಮೊದಲ ಅವಧಿಯಲ್ಲಿ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಹೇಳಿದರು. ಆ ಪ್ರಕರಣಗಳನ್ನೆಲ್ಲ ಮುಚ್ಚಿಹಾಕುವುದಕ್ಕೋಸ್ಕರ ಭ್ರಷ್ಟಾಚಾರ ನಿಗ್ರಹ ದಳವನ್ನು (ACB) ರಚಿಸಿದ್ದರು ಎಂದು ಬೊಮ್ಮಾಯಿ ಹೇಳಿದರು. ಬಿಎಸ್ ಯಡಿಯೂರಪ್ಪನವರು (BS Yediyurappa) ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸುವಾಗ ತಮ್ಮ ಆಡಳಿತಾವಧಿಯನ್ನೂ ಅದರಲ್ಲಿ ಸೇರಿಸಿದ್ದರು. ಸಿದ್ದರಾಮಯ್ಯನವರಿಗೆ ಅಷ್ಟೆಲ್ಲ ವಿಶ್ವಾಸವಿರೋದಾದರೆ, ತಮ್ಮ ಆಡಳಿತಾವಧಿಯನ್ನೂ ತನಿಖೆಗೆ ಒಪ್ಪಿಸಲಿ ಎಂದು ಬೊಮ್ಮಾಯಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ