ಬಿಜೆಪಿ-ಜೆಡಿಎಸ್ ಮೈತ್ರಿ ವಿಧಾನಸಭಾ ಚುನಾವಣೆಗೂ ಅನ್ವಯಿಸುತ್ತದೆಯೇ? ಜಿಟಿ ದೇವೇಗೌಡ ಹೇಳೋದನ್ನು ಕೇಳಿದರೆ ಹೌದು!

|

Updated on: Sep 27, 2023 | 6:30 PM

ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಮೈತ್ರಿಯ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದರು. ಅವರನ್ನು ಕುರಿತು ಕೇಳಿದ ಪ್ರಶ್ನೆಗೆ ಗೌಡರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕರೆಮ್ಮನವರೇ ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿರುತ್ತಾರೆ. ಈ ಬಾರಿ ಅವರಿಗೆ ಮತ ನೀಡಿದವರು ಮುಂದಿನ ಬಾರಿಯೂ ನೀಡುತ್ತಾರೆ ಮತ್ತು ದೇವದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಈ ಬಾರಿ ಪಡೆದ ವೋಟುಗಳ ಶೇಕಡ 50ರಷ್ಟು ಮಾತ್ರ ಕರೆಮ್ಮನವರಿಗೆ ಸಿಕ್ಕರೂ ಸಾಕ, ಅವರು ಅನಾಯಸವಾಗಿ ಗೆಲ್ಲುತ್ತಾರೆ ಎಂದು ಹೇಳಿದರು.

ಕೊಪ್ಪಳ: ಜೆಡಿಎಸ್ ಪಕ್ಷದ ಹಿರಿಯ ನಾಯಕ ಜಿಟಿ ದೇವೇಗೌಡ (Gt Devegowda) ಹೇಳುವುದನ್ನು ಕೇಳಿದರೆ ರಾಜ್ಯದ ರಾಜಕೀಯ ಚಿತ್ರಣ (political scenario) ಸಂಪೂರ್ಣವಾಗಿ ಬದಲಾಗಲಿದೆ. ಮುಂಬರುವ ಲೋಕಸಭಾ (Lok Sabha polls) ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ  ನಡುವೆ ನೇರಾನೇರ ಹೋರಾಟ ನಡೆಯಲಿದೆ. ಕೊಪ್ಪಳದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಜಿಟಿಡಿ 2028ರ ವಿಧಾನಸಭಾ ಚುನಾವಣೆಯ ಚಿತ್ರಣವನ್ನೂ ಬಿಚ್ಚಿಟ್ಟರು. ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಮೈತ್ರಿಯ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದರು. ಅವರನ್ನು ಕುರಿತು ಕೇಳಿದ ಪ್ರಶ್ನೆಗೆ ಗೌಡರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕರೆಮ್ಮನವರೇ ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿರುತ್ತಾರೆ. ಈ ಬಾರಿ ಅವರಿಗೆ ಮತ ನೀಡಿದವರು ಮುಂದಿನ ಬಾರಿಯೂ ನೀಡುತ್ತಾರೆ ಮತ್ತು ದೇವದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಈ ಬಾರಿ ಪಡೆದ ವೋಟುಗಳ ಶೇಕಡ 50ರಷ್ಟು ಮಾತ್ರ ಕರೆಮ್ಮನವರಿಗೆ ಸಿಕ್ಕರೂ ಸಾಕ, ಅವರು ಅನಾಯಸವಾಗಿ ಗೆಲ್ಲುತ್ತಾರೆ ಎಂದು ಹೇಳಿದರು. ಮೈತ್ರಿಯ ಬಗ್ಗೆ ಕರೆಮ್ಮನವರಿಗೆ ವಿಶ್ವಾಸ ಮೂಡಲು ಗೌಡರು ಇದನ್ನು ಹೇಳಿರಬಹುದಾದ ಅಂಶವನ್ನು ಅಲ್ಲಗಳೆಯಲಾಗದು. ಬಿಜೆಪಿ ಸಂಸದ ಇದ್ದಲ್ಲಿ ಜೆಡಿಎಸ್ ಶಾಸಕ, ಜೆಡಿಎಸ್ ಸಂಸದ ಇದ್ದೆಡೆ ಬಿಜೆಪಿ ಶಾಸಕ ಎಂದು ದೇವೇಗೌಡ ಹೇಳಿದರು. ಎಲ್ಲ ಜಿಟಿ ದೇವೇಗೌಡ ಅಂದುಕೊಂಡಂತೆ ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ಉಳಿಗಾಲವಿಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ