ಪೈರಸಿ ಮಾಡಿ ಸಿಕ್ಕಿ ಬಿದ್ರೆ ಇದೆ ಮಾರಿಹಬ್ಬ
‘ಪೈರಸಿ ಕಾಟ ಜೋರಾಗಿದೆ. ಎಲ್ಲಾ ಸಿನಿಮಾಗಳು ಸಂಕಷ್ಟ ಅನುಭವಿಸುತ್ತಿವೆ. ಈಗ ಪೈರಸಿ ಕಾಟದ ಬಗ್ಗೆ ಝೈದ್ ಖಾನ್ ಮಾತನಾಡಿದ್ದಾರೆ. ಪೈರಸಿ ಕಾಟವನ್ನು ಅವರು ಖಂಡಿಸಿದ್ದಾರೆ. ಸಿಕ್ಕಿ ಬಿದ್ದರೆ ಜೈಲೂಟ ಫಿಕ್ಸ್ ಎಂದು ಅವರು ಹೇಳಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದೆ ಕೆಲವರು ಪೈರಸಿ ಮಾಡೋದನ್ನು ಮುಂದುವರಿಸಿದ್ದಾರೆ.
‘ಪೈರಸಿ’ ಮಾಡಿ ಸಿಕ್ಕಿ ಬಿದ್ದರೆ ಮಾರಿಹಬ್ಬ ಫಿಕ್ಸ್. ಹೀಗೆ ಹೇಳ್ತಿರೋದು ನಾವಲ್ಲ. ನಟ ಝೈದ್ ಖಾನ್. ಅವರು ‘ಕಲ್ಟ್’ ಹೆಸರಿನ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ವಿವಿಧ ಜಿಲ್ಲೆಗಳಿಗೆ ತೆರಳುತ್ತಿದ್ದಾರೆ. ಈ ವೇಳೆ ಅವರು ಪೈರಸಿ ಮಾಡುವರ ಬಗ್ಗೆ ಮಾತನಾಡಿದ್ದಾರೆ. ‘ಪೈರಸಿ ಮಾಡುವವರು ಮಾಡಬೇಡಿ ಎಂದು ಹೇಳಿದರೆ ನಿಲ್ಲಿಸಲ್ಲ. ಆದರೆ, ನೀವು ಸಿಕ್ಕಿ ಹಾಕಿಕೊಳ್ಳಬೇಡಿ. ಸಿಕ್ಕಿ ಹಾಕಿಕೊಂಡ್ರೆ ಜೈಲೂಟ ಗ್ಯಾರಂಟಿ’ ಎಂದು ಝೈದ್ ಖಾನ್ ಎಚ್ಚರಿಸಿದ್ದಾರೆ. ‘ಮಾರ್ಕ್’, ‘ಡೆವಿಲ್’ ಅಂತಹ ಸಿನಿಮಾಗಳಿಗೆ ಪೈರಸಿ ಕಾಟ ಎದುರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 26, 2025 11:42 AM
