‘ಕಬ್ಜದಂತಹ ಮೇಕಿಂಗ್ ಮಾಡೋಕೆ ನಿರ್ದೇಶಕನಿಗೆ ತಾಕತ್ ಬೇಕು’: ಆರ್. ಚಂದ್ರು

Updated on: Feb 01, 2023 | 10:05 AM

ನೀವು ಈಗಾಗಲೇ ಕಬ್ಜ ಟೀಸರ್ ನೋಡಿರುತ್ತೀರಿ. ಆ ರೀತಿ ಮಾಡಬೇಕು ಎಂದರೆ ನಿರ್ದೇಶಕನಿಗೆ ತಾಕತ್ತು ಬೇಕು. ಹಾಗೆಯೇ ಹಣ ಬೇಕು ಎಂದಿದ್ದಾರೆ ಆರ್​. ಚಂದ್ರು.

ಆರ್​. ಚಂದ್ರು (R. Chandru) ನಿರ್ದೇಶನದ ‘ಕಬ್ಜ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಟೀಸರ್​​ ಗುಣಮಟ್ಟ ಸಾಕಷ್ಟು ಗಮನಸೆಳೆದಿದೆ. ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಕೆಜಿಎಫ್ (KGF Movie) ನೋಡಿದ ದಿನ ನನಗೆ ನಿದ್ದೆಯೇ ಬಂದಿರಲಿಲ್ಲ. ಆ ಚಿತ್ರ ಅಷ್ಟು ಕಾಡಿತ್ತು. ಆ ಟಿಂಟ್​​ನ ತರಬೇಕು ಎಂದರೆ ಅಷ್ಟು ಸುಲಭವಲ್ಲ. ನೀವು ಈಗಾಗಲೇ ಕಬ್ಜ ಟೀಸರ್ ನೋಡಿರುತ್ತೀರಿ. ಆ ರೀತಿ ಮಾಡಬೇಕು ಎಂದರೆ ನಿರ್ದೇಶಕನಿಗೆ ತಾಕತ್ತು ಬೇಕು. ಹಾಗೆಯೇ ಹಣ ಬೇಕು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Feb 01, 2023 09:58 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More