ಪ್ರತಿಯೊಂದು ಮನೆಗಳಲ್ಲಿಯೂ ಕಲಹ, ಸಂಘರ್ಷ ಏನಾದರೂ ಒಂದು ತಾಪತ್ರಯ ದಿನ ಬೆಳಗಾದರೆ ಇದ್ದೇ ಇರುತ್ತದೆ. ಹಾಗಾದರೆ ಇದಕ್ಕೆಲ್ಲ ಪರಿಹಾರವೇನು ಎಂದು ಕೇಳಿದರೆ, ನಮ್ಮ ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ, ಧೂಪ ಶಾಸ್ತ್ರ ಎಂಬುದು ಒಂದಿದೆ. ಅಂದರೆ ಮನೆಯಲ್ಲಿ ದೂಪ ಹಚ್ಚುವುದು. ಮನೆಯಲ್ಲಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಧೂಪ ಹಚ್ಚುವುದರಿಂದ ಅನೇಕ ಸಂಕಷ್ಟಗಳ ನಿವಾರಣೆಯಾಗುತ್ತದೆ. ಇದಕ್ಕೆ ಕೇವಲ ಶಾಸ್ತ್ರ ಮಾತ್ರವಲ್ಲದೆ ವೈಜ್ಞಾನಿಕ ಕಾರಣಗಳೂ ಇವೆ. ಆ ಬಗ್ಗೆ ಬಸವರಾಜ ಗುರೂಜಿ ವಿವರಿಸಿದ್ದಾರೆ.
ಧೂಪವನ್ನು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಹಚ್ಚುವುದು ಸೂಕ್ತ. ಇದರಿಂದ ಮನೆಯಲ್ಲಿ ಉತ್ತಮವಾದ ವಾತಾವರಣವಿರುತ್ತದೆ. ವೈಜ್ಞಾನಿಕವಾಗಿ ನೋಡಲು ಹೋದರೆ, ಧೂಪ ಹಚ್ಚುವುದರಿಂದ ಮನೆಯಲ್ಲಿ ಪಸರಿಸುವ ಸುಗಂಧ ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸಿದಂತೆ ತಡೆಯುತ್ತದೆ. ವೈಜ್ಞಾನಿಕವಾಗಿ ನೋಡುವುದಾದರೆ, ವೈರಸ್ನಂತ ರೋಗಕಾರಕಗಳು ಮನೆಗಳ ಪ್ರವೇಶಿಸಿದಂತೆ ಧೂಪದ ಹೊಗೆ ತಡೆಯುತ್ತದೆ.
ಆದರೆ ಯಾವುದೂ ಅತಿಯಾಗಬಾರದು. ಮಿತಿಯಲ್ಲಿ ಧೂಪವನ್ನು ಹಚ್ಚುವುದರಿಂದ ಆರೋಗ್ಯಕ್ಕೂ, ಮನಸ್ಸಿನ ನೆಮ್ಮದಿಗೂ ಬಹಳ ಉತ್ತಮ ಎಂದು ಗುರೂಜಿ ಹೇಳುತ್ತಾರೆ.
ಧೂಪ ಜಾಸ್ತಿ ಹಚ್ಚಿದರೆ ಸಣ್ಣ ಪುಟ್ಟ ಮಕ್ಕಳ ಉಸಿರಾಟಕ್ಕೆ ತೊಂದರೆ ಆಗಬಹುದು, ಶ್ವಾಸಕೋಶಕ್ಕೆ ಹಾನಿಯಾಗಬಹುದು. ಹಬ್ಬ ಹರಿದಿನಗಳಲ್ಲಿ ಮಿತವಾಗಿ ಧೂಪ ಹಚ್ಚುವುದು ಶ್ರೇಯಸ್ಕರ. ಮನೆಯ ಈಶಾನ್ಯ ಮೂಲೆಯಲ್ಲಿ ಧೂಪ ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಪಸರಿಸುತ್ತದೆ. ಆಯುರ್ವೇದದಲ್ಲಿ ಕೂಡ ಧೂಪ ಬಹಚ್ಚುವುದರ ಬಗ್ಗೆ ವಿಶೇಷ ಉಲ್ಲೇಖವಿದೆ ಎಂದು ಅವರು ಹೇಳಿದ್ದಾರೆ.