ವಿಜಯಪುರ: ಮೊಹರಂ ನಿಮಿತ್ತ ಕೆಂಡದಲ್ಲಿ ಕಂಬಳಿ ಹಾಸಿ ಕುಳಿತ ವ್ಯಕ್ತಿ; ವಿಡಿಯೋ ವೈರಲ್
ರಾಜ್ಯಾದ್ಯಂತ ಇಂದು(ಜು.29) ಮೊಹರಂ ಸಂಭ್ರಮ ಮನೆ ಮಾಡಿದ್ದು, ಅದರಂತೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮದಲ್ಲಿಯೂ ಮೊಹರಂ ಅದ್ದೂರಿಯಾಗಿ ನಡೆದಿದೆ. ಈ ವೇಳೆ ಅಲಾಯಿ ದೇವರ ಎದುರುಗೆ ಹಾಕಿದ ಕೆಂಡದಲ್ಲಿ ಕುಳಿತು ವ್ಯಕ್ತಯೊರ್ವ ಭಕ್ತಿ ಪರಾಕಾಷ್ಠೆ ಮೆರೆದಿದ್ದಾನೆ.
ವಿಜಯಪುರ, ಜು.29: ರಾಜ್ಯಾದ್ಯಂತ ಇಂದು(ಜು.29) ಮೊಹರಂ(Muḥarram) ಸಂಭ್ರಮ ಮನೆ ಮಾಡಿದ್ದು, ಅದರಂತೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮದಲ್ಲಿಯೂ ಮೊಹರಂ ಅದ್ದೂರಿಯಾಗಿ ನಡೆದಿದೆ. ಮೊಹರಂ ನಿಮಿತ್ತ ಇಂದು ನಸುಕಿನ ಜನ ಜಾವ ಗ್ರಾಮದ ಅಲಾಯಿ ದೇವರ ಎದುರುಗೆ ಹಾಕಿದ ಕೆಂಡದಲ್ಲಿ ಯಲ್ಲಾಲಿಂಗ ಹಿರೇಹಾಳ ಎಂಬ ವ್ಯಕ್ತಿ ಕಂಬಳಿ ಹಾಸಿ ಕುಳಿತು, ಕೆಲ ಕ್ಷಣ ಭಕ್ತಿ ಸಮರ್ಪಣೆ ಮಾಡಿ, ಬಳಿಕ ಬರಿಗೈಯಲ್ಲಿ ಕೆಂಡ ತುಂಬಿ ಕೆಂಡದಾರತಿ ಮಾಡಿದ ಘಟನೆ ನಡೆದಿದೆ. ಯಲ್ಲಾಲಿಂಗ ಅವರ ಭಕ್ತಿ ಪರಾಕಾಷ್ಟೆಗೆ ಗ್ರಾಮದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಬೆಂಕಿ ಮೇಲೆ ಕುಳಿತರೂ, ಕೈಯಿಂದ ಬೆಂಕಿ ತುಂಬಿದರೂ ಯಲ್ಲಾಲಿಂಗನಿ ಅವರಿಗೆ ಯಾವುದೇ ಸುಟ್ಟ ಗಾಯವಾಗಿಲ್ಲ. ಇದು ಅಲಾಯಿ ದೇವರ ಪವಾಡವೆಂದು ಜನರು ಹೇಳುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
