ತಲ್ವಾರ್​​ನಿಂದ ಕೇಕ್​ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ; ವಿಡಿಯೋ ವೈರಲ್​

Edited By: ಕಿರಣ್ ಹನುಮಂತ್​ ಮಾದಾರ್

Updated on: Jun 02, 2024 | 6:33 PM

ಬಾಗಲಕೋಟೆ (Bagalakote) ತಾಲೂಕಿನ ಹವೇಲಿ ಗ್ರಾಮದಲ್ಲಿ ‌ನಿನ್ನೆ(ಜೂ.01) ರಾತ್ರಿ ವ್ಯಕ್ತಿಯೋರ್ವ ತಲ್ವಾರ್(Talwar)​​ನಿಂದ ಕೇಕ್​ ಕಟ್ ಮಾಡಿದ ಘಟನೆ ನಡೆದಿದೆ. ತಲ್ವಾರ್​ ಹಿಡಿದು ಕೇಕ್ ಕತ್ತರಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಹಾಗೂ ಆಪ್ತರ ಸ್ಟೇಟಸ್ ಮೂಲಕ ವೈರಲ್​ ಆಗಿದೆ.

ಬಾಗಲಕೋಟೆ, ಜೂ.02: ವ್ಯಕ್ತಿಯೋರ್ವ ತಲ್ವಾರ್(Talwar)​​ನಿಂದ ಕೇಕ್​ ಕಟ್ ಮಾಡಿದ ಘಟನೆ ಬಾಗಲಕೋಟೆ (Bagalakote) ತಾಲೂಕಿನ ಹವೇಲಿ ಗ್ರಾಮದಲ್ಲಿ ‌ನಿನ್ನೆ(ಜೂ.01) ರಾತ್ರಿ ನಡೆದಿದೆ. ರಮೇಶ್ ರಾಠೋಡ್​​​ ಎಂಬುವವರು ತಮ್ಮ ಹುಟ್ಟುಹಬ್ಬವನ್ನ ತಲ್ವಾರ್​ನಿಂದ ಕೇಕ್​ನ್ನು ಕಟ್​ ಮಾಡುವ ಮೂಲಕ ಆಚರಣೆ ಮಾಡಿದ್ದು, ತಲ್ವಾರ್​ ಹಿಡಿದು ಕೇಕ್ ಕತ್ತರಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಹಾಗೂ ಆಪ್ತರ ಸ್ಟೇಟಸ್ ಮೂಲಕ ವೈರಲ್​ ಆಗಿದೆ. ಸಧ್ಯ ಈ ಘಟನೆ ಚರ್ಚೆಗೆ ಗ್ರಾಸವಾಗಿದೆ. ಇಂತಹುದೇ ಘಟನೆ ಜನವರಿ 15 ರಂದು ವಿಜಯಪುರ ನಗರದ ಪೇಟಿ ಬಾವಡಿಯಲ್ಲಿ ನಡೆದಿತ್ತು. ಅಮನ್ ಲೋಣಿ ಎಂಬ ಯುವಕನೋರ್ವ ತನ್ನ ಜನ್ಮದಿನದ ಕೇಕ್​ನ್ನು ತಲ್ವಾರ್​ನಿಂದ ಕತ್ತರಿಸಿದ್ದ. ಇದಕ್ಕೆ ರೌಡಿ ಶೀಟರ್ ಮಹ್ಮದ್ ಸಾಜೀದ್ ಇನಾಮದಾರ್ ಸಾಥ್ ನೀಡಿದ್ದ. ಆ ಬಳಿಕ ಇದೀಗ ಹವೇಲಿ ಗ್ರಾಮದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 02, 2024 06:31 PM
Follow Us
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More