ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು

Edited By:

Updated on: Oct 07, 2024 | 2:43 PM

ವಿದ್ಯುತ್​ ತಂತಿ ತುಂಡಾಗಿ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ(Chikkanahalli) ಗ್ರಾಮದಲ್ಲಿ ಇಂದು(ಸೋಮವಾರ) ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಈ ಕುರಿತು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಅ.07: ವಿದ್ಯುತ್​ ತಂತಿ ತುಂಡಾಗಿ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ(Chikkanahalli) ಗ್ರಾಮದಲ್ಲಿ ಇಂದು(ಸೋಮವಾರ) ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಚಿಕ್ಕನಹಳ್ಳಿ ಗ್ರಾಮದ ನಿವಾಸಿ ಮಂಜಮ್ಮ(50) ಮೃತ ದುರ್ದೈವಿ. ಮನೆ ಬಳಿ ನಿಂತಿದ್ದಾಗ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದು,  ದುರ್ಘಟನೆ ನಡೆದಿದೆ. ಸಧ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ  ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 07, 2024 02:41 PM
Follow Us
ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More