ಹಾವೇರಿ: ಕೆರೆ ಕೋಡಿ ಬಿದ್ದು ಇಡೀ ಗ್ರಾಮವೇ ಜಲಾವೃತ; ಜಿಲ್ಲಾಡಳಿತ ಡೋಂಟ್ ಕೇರ್

|

Updated on: Aug 22, 2024 | 4:14 PM

ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕು ಕಚವಿ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು ಇಡೀ ಗ್ರಾಮವೇ ಜಲಾವೃತವಾಗಿದೆ. ರಾತ್ರಿಯಿಡಿ ನಿದ್ದೆ ಬಿಟ್ಟು ಮನೆಗಳಿಗೆ ನುಗ್ಗಿದ ನೀರನ್ನು ಗ್ರಾಮಸ್ಥರು ಹೊರ ಹಾಕಿದ್ದು, ಇಷ್ಟೆಲ್ಲ ಸಮಸ್ಯೆ ಆದರೂ ಜಿಲ್ಲಾಡಳಿತ ಮಾತ್ರ ಡೋಂಟ್ ಕೇರ್ ಎನ್ನುತ್ತಿದೆ.

ಹಾವೇರಿ, ಆ.22: ಕೆರೆ ಕೋಡಿ ಬಿದ್ದು ಇಡೀ ಗ್ರಾಮವೇ ಜಲಾವೃತವಾಗಿದ್ದು, ಸುಮಾರು 100 ಕ್ಕೂ ಹೆಚ್ಚು ಮನೆಗಳಿಗೆ ಕೆರೆ ನೀರು ನುಗ್ಗಿದ ಘಟನೆ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕು ಕಚವಿ ಗ್ರಾಮದಲ್ಲಿ ನಡೆದಿದೆ. ಕಚವಿ ಗ್ರಾಮದ ಬಳಿಯೇ ಇರುವ 100 ಎಕರೆಯ ವಿಸ್ತೀರ್ಣದ ಕೊಪ್ಪದ ಕೆರೆ ಕೋಡಿ ಬಿದ್ದು ಕಚವಿ ಗ್ರಾಮದತ್ತ ನೀರು ನುಗ್ಗಿದೆ. ನಾವು ಬೀದಿಗೆ ಬಿದ್ದು ಒದ್ದಾಡುತ್ತಿದ್ದೇವೆ.ಮ ಇತ್ತ ಮನೆಗಳಿಗೆ ನೀರು ನುಗ್ಗಿದರೂ ಅಧಿಕಾರಿಗಳು ಮಾತ್ರ ಬೆಚ್ಚಗೆ ಕುಳಿತಿದ್ದಾರೆ ಎಂದು ಕಚವಿ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾತ್ರಿಯಿಡಿ ನಿದ್ದೆ ಬಿಟ್ಟು ಮನೆಗಳಿಗೆ ನುಗ್ಗಿದ ನೀರನ್ನು ಗ್ರಾಮಸ್ಥರು ಹೊರ ಹಾಕಿದ್ದು, ಇಷ್ಟೆಲ್ಲ ಸಮಸ್ಯೆ ಆದರೂ ಜಿಲ್ಲಾಡಳಿತ ಡೋಂಟ್ ಕೇರ್ ಎನ್ನುತ್ತಿದೆ. ಇನ್ನು ಗ್ರಾಮದ ವಯೋವೃದ್ದರು, ವಾಹನ ಸವಾರರರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on