Loading video

Devanahalli: RRR ಸಿನಿಮಾ ಸ್ಟೈಲಲ್ಲಿ ಚಿನ್ನದಂಗಡಿ ದೋಚೋಕೆ ಬಂದ ಖದೀಮರು; ಕೃತ್ಯ ಸಿಸಿಟಿವಿಯಲ್ಲಿ ಸೆರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 03, 2023 | 1:01 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದ ಹೆದ್ದಾರಿಯಲ್ಲಿದ್ದ ಚಿನ್ನದಂಗಡಿ ದೋಚಲು ಖತರ್ನಾಕ್ ಕಳ್ಳರು ವಿಫಲ ಯತ್ನ ನಡೆಸಿರುವ ಘಟನೆ ನಡೆದಿದ್ದು, ಖದೀಮರ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ.

ಬೆಂಗಳೂರು ಗ್ರಾಮಾಂತರ, ಆ.3: ಜಿಲ್ಲೆಯ ಹೊಸಕೋಟೆ(Hosakote) ತಾಲೂಕಿನ ತಾವರೆಕೆರೆ ಗ್ರಾಮದ ಹೆದ್ದಾರಿಯಲ್ಲಿದ್ದ ಚಿನ್ನದಂಗಡಿ ದೋಚಲು ಖತರ್ನಾಕ್ ಕಳ್ಳರು ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ. ಹೌದು, ಹೆದ್ದಾರಿಗೆ ಹೊಂದಿಕೊಂಡಿರುವ ಚಿನ್ನದಂಗಡಿಗೆ ಖದೀಮರು ಗ್ಯಾಸ್ ಕಟರ್ ಮೂಲಕ ಬಂದು ಕೆಜಿ ಗಟ್ಟಲೆ ಚಿನ್ನ ದೋಚಲು ಯತ್ನಿಸಿದ್ದರು. ಆದ್ರೆ, ಅಂಗಡಿಯಲ್ಲಿ ಸಿಬ್ಬಂದಿ ಇರುವುದನ್ನ ಕಂಡ ಖದೀಮರು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಇನ್ನು ಕಳ್ಳರ ವಿಫಲಯತ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ