ಉತ್ತರ ಪ್ರದೇಶ: ಬೀದಿ ನಾಯಿಗೆ ಇಲ್ಲಿ ಊಟ ಹಾಕಬೇಡಿ ಎಂದು ವಿರೋಧಿಸಿದ ವೃದ್ಧನಿಗೆ ಥಳಿಸಿದ ಯುವತಿ, ವಿಡಿಯೋ ವೈರಲ್
ಬೀದಿ ನಾಯಿಗೆ ಇಲ್ಲಿ ಊಟ ಹಾಕಬೇಡಿ ಎಂದು ವಿರೋಧಿಸಿದಕ್ಕೆ 22 ವರ್ಷದ ಯುವತಿ 79 ವರ್ಷದ ವೃದ್ಧನಿಗೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕ್ರಾಸಿಂಗ್ಸ್ ರಿಪಬ್ಲಿಕ್ ಟೌನ್‌ಶಿಪ್‌ನಲ್ಲಿರುವ ಪಂಚಶೀಲದಲ್ಲಿ ನಡೆದಿದೆ.
ಉತ್ತರ ಪ್ರದೇಶ, ಆ.1: ಬೀದಿ ನಾಯಿಗೆ ಇಲ್ಲಿ ಊಟ ಹಾಕಬೇಡಿ ಎಂದು ವಿರೋಧಿಸಿದಕ್ಕೆ 22 ವರ್ಷದ ಯುವತಿ 79 ವರ್ಷದ ವೃದ್ಧನಿಗೆ ಥಳಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನ ಕ್ರಾಸಿಂಗ್ಸ್ ರಿಪಬ್ಲಿಕ್ ಟೌನ್‌ಶಿಪ್‌ನಲ್ಲಿರುವ ಪಂಚಶೀಲದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವತಿ ವೃದ್ಧನಿಗೆ ಕೋಲಿನಿಂದ ಹಲವು ಬಾರಿ ಥಳಿಸಿದ್ದಾಳೆ. ಈ ವಿಡಿಯೋ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಯುವತಿಯನ್ನು ಬಂಧನ ಮಾಡಲಾಗಿದೆ.
ಪೊಲೀಸರ ವರದಿ ಪ್ರಕಾರ ಯುವತಿಯನ್ನು ಸಿಮ್ರಾನ್ ಎಂದು ಗುರುತಿಸಲಾಗಿದೆ. ಇನ್ನು ಹಲ್ಲೆಗೊಳಗಾದ ವ್ಯಕ್ತಿಯನ್ನು ರೂಪನಾರಾಯಣ ಮೆಹ್ರಾ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿ ವೇವ್ ಸಿಟಿಯ ಸಹಾಯಕ ಪೊಲೀಸ್ ಆಯುಕ್ತ ಸಲೋನಿ ಅರ್ಗವಲ್, ಬೀದಿ ನಾಯಿಗೆ ಇಲ್ಲಿ ಊಟ ಹಾಕಬೇಡಿ, ನಾಯಿಗಳು ಈ ಪ್ರದೇಶದಲ್ಲಿ ಹೆಚ್ಚಾಗಿದ್ದು, ಹಲವು ಬಾರಿ ಜನರ ಮೇಲೆ ದಾಳಿ ಮಾಡಿದೆ. ಮಕ್ಕಳು, ವೃದ್ಧರು ಇಲ್ಲಿ ಓಡಾಡುತ್ತಾರೆ ಎಂದು ಊಟ ಹಾಕಲು ವಿರೋಧಿಸಿದ ರೂಪನಾರಾಯಣ ಮೆಹ್ರಾ ಅವರಿಗೆ ಯುವತಿ ಥಳಿಸಿದ್ದಾಳೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಹಿಂದೂ ಯುವತಿ ಜತೆಗೆ ದೇವಾಸ್ಥಾನದಲ್ಲಿ ಕಾಣಿಸಿಕೊಂಡ ಅನ್ಯಕೋಮಿನ ಯುವಕ, ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ವೃದ್ಧ ನೀಡಿದ ದೂರಿನ ಆಧಾರದ ಮೇಲೆ ಮತ್ತು ವಿಡಿಯೋ ಸಾಕ್ಷಿಯನ್ನು ಪರಿಗಣಿಸಿ ಯುವತಿಯ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕಳೆದೆರಡು ತಿಂಗಳುಗಳಲ್ಲಿ ಹಲವಾರು ನಾಯಿಗಳು ದಾಳಿ ಮಾಡಿರುವ ಘಟನೆಗಳು ನಡೆದಿವೆ, ಇದು ಹಲವಾರು ಜನರನ್ನು ಬಲಿ ತೆಗೆದುಕೊಂಡಿದೆ.
ಜೂನ್‌ನಲ್ಲಿ ಕ್ರಾಸಿಂಗ್ಸ್ ರಿಪಬ್ಲಿಕ್ ಟೌನ್‌ಶಿಪ್‌ನಲ್ಲಿ ಏಳು ವರ್ಷದ ಬಾಲಕನೊಬ್ಬನ ಮೇಲೆ ಪಿಟ್‌ಬುಲ್ ನಾಯಿ ದಾಳಿ ಮಾಡಿತ್ತು. ಇದರಿಂದ ಅವನ ಕಿವಿಯನ್ನು ಕಚ್ಚಿತು ಮತ್ತು ಅವನ ಹಿಂಭಾಗದ ಪ್ರದೇಶದಲ್ಲಿ ಗಂಭೀರವಾದ ಗಾಯಗಳನ್ನು ಮಾಡಿತು. ಘಟನೆಯ ನಂತರ ಸ್ಥಳೀಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದರು. ಈ ಕಾರಣಕ್ಕೆ ಇಲ್ಲಿ ಊಟ ಹಾಕಬೇಡಿ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:17 am, Thu, 3 August 23