ಚುನಾವಣಾ ಕುರುಕ್ಷೇತ್ರದಲ್ಲಿ ಕುಮಾರಸ್ವಾಮಿಯವರದ್ದು ಅರ್ಜುನನ ಪಾತ್ರ: ಅನಿತಾ ಕುಮಾರಸ್ವಾಮಿ

|

Updated on: Jan 31, 2023 | 2:27 PM

ಚುನಾವಣಾ ಯದ್ಧದಲ್ಲಿ ತಮ್ಮ ಪತಿ ಹೆಚ್ ಡಿ ಕುಮಾರಸ್ವಾಮಿಯವರ ಪಾತ್ರ ಯಾವುದೆನ್ನುವುದು ಗೊತ್ತಿಲ್ಲ ಅಂತ ಹೇಳಿ ಪ್ರಾಯಶಃ ಅರ್ಜುನನ ಪಾತ್ರ ಇರಬಹುದೆಂದು ಭಾವಿಸುತ್ತೇನೆ ಅಂದರು.

ರಾಮನಗರ: ಅನಿತಾ ಕುಮಾರಸ್ವಾಮಿಯವರು (Anita Kumaraswamy) ಮಾಧ್ಯಮಗಳೊಂದಿಗೆ ಹೆಚ್ಚು ಮಾತಾಡುವುದಿಲ್ಲ, ಸಾರ್ವಜನಿಕ ಸಮಾರಂಭಗಳಲ್ಲೂ ಅವರು ಭಾಷಣ ಮಾಡುವುದು ಬಹಳ ಕಡಿಮೆ ಸಂದರ್ಭಗಳಲ್ಲಿ ಮಾತ್ರ. ರಾಮನಗರದ ಶಾಸಕಿಯಾಗಿರುವ ಅವರು ಮಂಗಳವಾರ ಹಾರೋಹಳ್ಳಿಯಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತಾಡುವಾಗ ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಕುರುಕ್ಷೇತ್ರಕ್ಕೆ ಹೋಲಿಸಿ ಆ ಯುದ್ಧದ ಹಾಗೆ ಚುನಾವಣಾ ಯುದ್ಧದಲ್ಲೂ ಧರ್ಮವೇ ಗೆಲ್ಲಬೇಕು ಮತ್ತು ಗೆಲ್ಲಿಸುವ ವಿಶ್ವಾಸ ಜನರ ಮೇಲಿದೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅನಿತಾ ಕುಮಾರಸ್ವಾಮಿ, ಚುನಾವಣಾ ಯದ್ಧದಲ್ಲಿ ತಮ್ಮ ಪತಿ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಪಾತ್ರ ಯಾವುದೆನ್ನುವುದು ಗೊತ್ತಿಲ್ಲ ಅಂತ ಹೇಳಿ ಪ್ರಾಯಶಃ ಅರ್ಜುನನ (Arjun) ಪಾತ್ರ ಇರಬಹುದೆಂದು ಭಾವಿಸುತ್ತೇನೆ ಅಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 31, 2023 02:25 PM