Floods in North India: ಹಿಮಾಚಲ ಪ್ರದೇಶದಲ್ಲಿ ಕುಂಭದ್ರೋಣ, ಪ್ರವಾಹದ ಅಬ್ಬರಕ್ಕೆ ಕುಸಿದು ಬಿದ್ದ ಹೋಟೆಲ್ ಕಟ್ಟಡ

ಅರುಣ್​ ಕುಮಾರ್​ ಬೆಳ್ಳಿ

Updated on: Jul 10, 2023 | 6:14 PM

ಮೇಲ್ನೋಟಕ್ಕೆ ಹೋಟೆಲ್ ಕಟ್ಟಡ ಸಶಕ್ತವಾಗೇ ಕಾಣುತ್ತದೆ. ಆದರೆ ನೀರಿನ ಅಬ್ಬರ ಇಂಥ ಕಟ್ಟಡವನನ್ನೂ ಉರುಳಿಸುತ್ತದೆ ಅಂದರೆ ಪ್ರವಾಹದ ಸ್ಥಿತಿ ಹೇಗಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು.

ಶಿಮ್ಲಾ: ಹಿಮಾಚಲ ಪ್ರದೇಶದ ಸೇರಿದಂತೆ ಉತ್ತರ ಭಾರತ ನೈಸರ್ಗಿಕ ವಿಕೋಪದಿಂದ (natural disaster) ತತ್ತರಿಸಿದೆ. ಒಂದೇಸ ಸಮ ಮಳೆ ಸುರಿಯುತ್ತಿರುವುದರಿಂದ ನದಿಗಳು ಉಕ್ಕಿ ಹರಿಯುತ್ತಿದ್ದು ಹಲವಾರು ಕಡೆಗಳಲ್ಲಿ ಪ್ರವಾಹದ ಸ್ಥಿತಿ ಎದುರಾಗಿದೆ. ಹಿಮಾಚಲದ ಶಿಮ್ಲಾ (Shimla), ಮನಿಲಾ (Manila) ಮೊದಲಾದ ನಗರಗಳಲ್ಲಿ ಪ್ರವಾಹದಿಂದ ಆನಾಹುತಗಳು ಸಂಭವಿಸುತ್ತಿದ್ದು ಈಗಾಗಲೇ 17 ಜನ ಬಲಿಯಾಗಿದ್ದಾರೆ. ಕಾರುಗಳು ಕೊಚ್ಚಿಕೊಂಡು ಹೋಗಿವೆ ಮತ್ತು ಕಟ್ಟಡಗಳು ಇಸ್ಪೀಟ್ ಎಲೆಗಳಂತೆ (pack of cards) ಕುಸಿದು ಬೀಳುತ್ತಿವೆ. ಈ ವಿಡಿಯೋದಲ್ಲಿ ನದಿ ದಡಕ್ಕಿರುವ ಒಂದು ಹೋಟೆಲ್ ಅನಾಮತ್ತಾಗಿ ನದಿಯಲ್ಲಿ ಕುಸಿದು ಬೀಳಿತ್ತಿರುವುದನ್ನು ನೋಡಬಹುದು. ಮೇಲ್ನೋಟಕ್ಕೆ ಹೋಟೆಲ್ ಕಟ್ಟಡ ಸಶಕ್ತವಾಗೇ ಕಾಣುತ್ತದೆ. ಆದರೆ ನೀರಿನ ಅಬ್ಬರ ಇಂಥ ಕಟ್ಟಡವನನ್ನೂ ಉರುಳಿಸುತ್ತದೆ ಅಂದರೆ ಪ್ರವಾಹದ ಸ್ಥಿತಿ ಹೇಗಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.