ರಾಮನಗರದಲ್ಲಿ ಸುರಿದ ಭಾರೀ ಪ್ರಮಾಣದ ಮಳೆಗೆ ರೈತರ ಬದುಕೇ ಕೊಚ್ಚಿಕೊಂಡು ಹೋಗಿದೆ!
ಸಂಬಂಧಪಟ್ಟ ಇಲಾಖೆಗಳು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 1,110 ಹೆಕ್ಟೇರ್ ಗಳಷ್ಟು ಕೃಷಿ ಭೂಮಿ ಮತ್ತು 500 ಹೆಕ್ಟೇರ್ ಗಳಷ್ಟು ತೋಟಗಾರಿಕಾ ಭೂಮಿಯಲ್ಲಿನ ಬೆಳೆಗಳು ಸರ್ವನಾಶವಾಗಿವೆ.
ರಾಮನಗರದಲ್ಲಿ (Ramanagara) ನಾಲ್ಕೈದು ದಿನಗಳ ಕಾಲ ಸುರಿದ ಮಳೆಯಿಂದ ಈ ಭಾಗದ ರೈತರ (Farmers) ಬದುಕು ಕೂಡ ಕೊಚ್ಚಿಕೊಂಡು ಹೋಗಿದೆ. ಸಂಬಂಧಪಟ್ಟ ಇಲಾಖೆಗಳು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 1,110 ಹೆಕ್ಟೇರ್ ಗಳಷ್ಟು ಕೃಷಿ ಭೂಮಿ ಮತ್ತು 500 ಹೆಕ್ಟೇರ್ ಗಳಷ್ಟು ತೋಟಗಾರಿಕಾ ಭೂಮಿಯಲ್ಲಿನ ಬೆಳೆಗಳು ಸರ್ವನಾಶವಾಗಿವೆ. ದೃಶ್ಯಗಳಲ್ಲಿ ನಿಮಗೆ ಕಾಣುತ್ತಿರುವ ಹಾಗೆ ಕೃಷಿ ಭೂಮಿ ಕೊಚ್ಚಿ ಹೋಗಿವೆ. ಈ ಭಾಗದ ನಾಯಕರು ಮತ್ತು ಅಧಿಕಾರಿಗಳು ರೈತರ ನೆರವಿಗೆ ಧಾವಿಸದಿದ್ದರೆ ಅವರ ಬದುಕು ನಿರ್ಭರವಾಗಲಿದೆ.