ಅವಸರದಲ್ಲಿ ಬೈಕ್​ನಲ್ಲೇ ಕೀ ಮರೆತು ಹೋಗೋರೆ ಹುಷಾರ್; ಕಾದು ಕೂತು ಬೈಕ್ ಕದೀತಾರೆ ಎಚ್ಚರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 06, 2024 | 3:28 PM

ಮಹಾನಗರ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಎಷ್ಟೇ ಹರಸಾಹಸ ಪಟ್ಟರು ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಬೆಂಗಳೂರಿನ ಎಸ್ ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ. ಬೈಕ್​ಲ್ಲಿ ಕೀ ಬಿಟ್ಟು ಹೋಗುವುದನ್ನೇ ಕಾಯುತ್ತಿದ್ದ ಖದೀಮ, ತನ್ನ ಬೈಕ್​​ ಎಂಬಂತೆಯೇ ಕಳ್ಳತನ ಮಾಡಿದ್ದು, ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು, ಫೆ.06: ಸಿಲಿಕಾನ್​ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚುತ್ತಿದ್ದು, ಅವಸರದಲ್ಲಿ ಬೈಕ್​ನಲ್ಲೇ ಕೀ ಮರೆತು ಹೋಗುವವರೇ ಹುಷಾರ್ ಆಗಿರುವುದು ಒಳ್ಳೆಯದು. ಇಲ್ಲಿದಿದ್ದರೆ, ನಿಮ್ಮ ಬೈಕ್(Bike) ಕೂಡ ಕಳ್ಳತನವಾಗಬಹುದು. ಬೆಂಗಳೂರಿನ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆ(SJ Park Police Station) ವ್ಯಾಪ್ತಿಯಲ್ಲಿ ಕೀ ಬಿಟ್ಟು ಹೋಗುವುದನ್ನೇ ಗಮನಿಸುತ್ತಿದ್ದ ಖತರ್ನಾಕ್​ ಖದೀಮನೊಬ್ಬ ಕ್ಷಣಾರ್ಧದಲ್ಲೇ ಬೈಕನ್ನು ಕದ್ದೊಯ್ದಿದ್ದಾನೆ. ತನ್ನದೇ ಬೈಕ್ ಎಂಬುವಂತೆ ನೀಟಾಗಿ ಬೈಕ್ ಓಡಿಸಿಕೊಂಡು ಹೋದ ಆಸಾಮಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್​ ಕದ್ದ ಖದೀಮರು

ಇನ್ನು ಇಂತಹುದೇ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹಳೆ ಚಂದಾಪುರ ಬಳಿ ನಡೆದಿದೆ. ಮನೆಯ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್​ನ್ನು ಕಳ್ಳರು ಕದ್ದಿದ್ದಾರೆ. ರಮೇಶ್ ಎಂಬುವವರಿಗೆ ಸೇರಿದ ಬೈಕ್ ಇದಾಗಿದ್ದು, ಮುಂಜಾನೆ 4 ಗಂಟೆ ಸುಮಾರಿಗೆ ಹ್ಯಾಂಡಲ್ ಲಾಕ್ ಮುರಿದು ಈ ಕೃತ್ಯ ಎಸಗಲಾಗಿದೆ. ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ