‘ಪ್ರತಿ ತಂಡಕ್ಕೂ ಆ ಬಯಕೆ ಇದೆ’; ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ

|

Updated on: Sep 17, 2024 | 9:05 PM

Rohit Sharma: ಬಾಂಗ್ಲಾದೇಶ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರ ಆತ್ಮವಿಶ್ವಾಸದ ಹೇಳಿಕೆಗೆ ಸರಿಯಾಗಿ ಟಕ್ಕರ್ ನೀಡಿರುವ ರೋಹಿತ್ ಶರ್ಮಾ, ಭಾರತದಲ್ಲಿ ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾವನ್ನು ಸೋಲಿಸುವುದು ಅಸಾಧ್ಯದ ಮಾತು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದೆ. ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್ 19 ರಂದು ಚೆನ್ನೈನಲ್ಲಿ ಆರಂಭವಾಗಲಿದೆ. ಆದರೆ ಆ ಟೆಸ್ಟ್ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ನಾಯಕರ ಹೇಳಿಕೆಗಳು ಈ ಪಂದ್ಯದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿವೆ. ಬಾಂಗ್ಲಾದೇಶ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರ ಆತ್ಮವಿಶ್ವಾಸದ ಹೇಳಿಕೆಗೆ ಸರಿಯಾಗಿ ಟಕ್ಕರ್ ನೀಡಿರುವ ರೋಹಿತ್ ಶರ್ಮಾ, ಭಾರತದಲ್ಲಿ ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾವನ್ನು ಸೋಲಿಸುವುದು ಅಸಾಧ್ಯದ ಮಾತು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ಸವಾಲಿನ ಸರಣಿ

ವಾಸ್ತವವಾಗಿ ಭಾರತಕ್ಕೆ ಬರುವ ಮುನ್ನ ಬಾಂಗ್ಲಾದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಂಗ್ಲಾದೇಶ ನಾಯಕ ನಜ್ಮುಲ್ ಹುಸೇನ್ ಶಾಂಟೊ, ‘ಇದು ನಮಗೆ ಸವಾಲಿನ ಸರಣಿಯಾಗಿದೆ. ಆದರೆ ಪಾಕಿಸ್ತಾನದ ವಿರುದ್ಧ ಉತ್ತಮ ಸರಣಿಯನ್ನು ಆಡಿದ ನಂತರ, ನಮ್ಮ ತಂಡದ ವಿಶ್ವಾಸ ಹೆಚ್ಚಿದೆ. ಪ್ರತಿಯೊಂದು ಸರಣಿಯು ಒಂದು ಅವಕಾಶವಾಗಿದ್ದು, ನಾವು ಎರಡೂ ಪಂದ್ಯಗಳನ್ನು ಗೆಲ್ಲಲು ಆಡುತ್ತೇವೆ. ನಾವು ಗೆಲ್ಲಲು ನಾವು ಮಾಡಬೇಕಾದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತೇವೆ ಎಂದಿದ್ದರು.

ಭಾರತವನ್ನು ಸೋಲಿಸಲು ಬಯಸುತ್ತದೆ

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಳಿ ಈ ಬಗ್ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ರೋಹಿತ್, ‘ಪ್ರತಿಯೊಂದು ತಂಡವೂ ಭಾರತವನ್ನು ಸೋಲಿಸಲು ಬಯಸುತ್ತದೆ. ಆದರೆ ನಾವು ಇತರರು ಏನು ಹೇಳುತ್ತಾರೆಂದು ಹೆದರುವುದಿಲ್ಲ ಎಂದರು. ಈ ವೇಳೆ ಇಂಗ್ಲೆಂಡ್‌ ತಂಡದ ಉದಾಹರಣೆಯನ್ನು ನೀಡಿದ ರೋಹಿತ್ ಶರ್ಮಾ, ‘ಈ ವರ್ಷದ ಆರಂಭದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡ ಕೂಡ ಬಹಳಷ್ಟು ಹೇಳಿಕೆಗಳನ್ನು ನೀಡಿತ್ತು. ಆದರೆ ನಾವು ಆ ವಿಷಯದ ಬಗ್ಗೆ ಹೆಚ್ಚು ಗಮನಹರಿಸಲಿಲ್ಲ.

ಎಲ್ಲಾ ತಂಡಗಳ ವಿರುದ್ಧ ಆಡಿದೆ

ಅದರ ಬದಲಿಗೆ ನಾವು ಫಲಿತಾಂಶವನ್ನು ನಮ್ಮ ಕಡೆಗೆ ತರುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸಿದೇವು. ಇದರ ಜೊತೆಗೆ ಇನ್ನು ಚೆನ್ನಾಗಿ ಆಡುವುದು ಹೇಗೆ ಎಂಬುದರ ಕಡೆಗೆ ನಮ್ಮ ಪ್ರಯತ್ನಗಳಿದ್ದವು. ಎದುರಾಳಿಗಳ ಬಗ್ಗೆ ನಾವು ಹೆಚ್ಚು ಯೋಚಿಸುವುದಿಲ್ಲ. ಏಕೆಂದರೆ ಈಗ ನೀವು ತಂಡಗಳ ಬಗ್ಗೆ ಮಾತನಾಡಿದರೆ, ಟೀಂ ಇಂಡಿಯಾ ಎಲ್ಲಾ ತಂಡಗಳ ವಿರುದ್ಧ ಕ್ರಿಕೆಟ್ ಆಡಿದೆ. ಆದ್ದರಿಂದ ಯಾವುದೇ ಪ್ರತ್ಯೇಕ ತಂತ್ರವನ್ನು ಮಾಡುವ ಅಗತ್ಯವಿಲ್ಲ. ಆದರೆ ತಂಡಕ್ಕೆ ಒಂದಿಬ್ಬರು ಹೊಸ ಹುಡುಗರು ಬಂದಿದ್ದರೆ, ಆಗ ಮಾತ್ರ ನಾವು ಅವರ ಬಗ್ಗೆ ಸ್ವಲ್ಪ ಯೋಚಿಸಿ ಮುನ್ನಡೆಯಬೇಕು ಎಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 17, 2024 09:03 PM