IND vs NZ: ಬರೋಬ್ಬರಿ 107 ಮೀ. ಉದ್ದದ ಸಿಕ್ಸರ್ ಸಿಡಿಸಿದ ಪಂತ್! ಹುಚ್ಚೆದ್ದು ಕುಣಿದ ಫ್ಯಾನ್ಸ್; ವಿಡಿಯೋ ನೋಡಿ
Rishabh Pant: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೇವಲ ಒಂದೇ ಒಂದು ರನ್ನಿಂದ ಶತಕ ವಂಚಿತರಾದರು. ಆದಾಗ್ಯೂ ಪಂತ್ ಬರೋಬ್ಬರಿ 107 ಮೀಟರ್ ಉದ್ದದ ಸಿಕ್ಸರ್ ಸಿಡಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುಂತೆ ಮಾಡಿದರು. ಪಂತ್ ಸಿಡಿಸಿದ ಈ ಉದ್ದದ ಸಿಕ್ಸರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೇವಲ ಒಂದೇ ಒಂದು ರನ್ನಿಂದ ತಮ್ಮ 7ನೇ ಟೆಸ್ಟ್ ಶತಕದಿಂದ ವಂಚಿತರಾಗಿದ್ದಾರೆ. ಆದಾಗ್ಯೂ ಕ್ರೀಸ್ನಲ್ಲಿ ಇದ್ದಷ್ಟು ಸಮಯ ಪಂತ್, ತಮ್ಮ ಹೊಡಿಬಡಿ ಆಟದ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 105 ಎಸೆತಗಳನ್ನು ಎದುರಿಸಿದ ಪಂತ್, 9 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳನ್ನು ಸಹ ಸಿಡಿಸಿದರು. ಇದರಲ್ಲಿ ಶತಕದಂಚಿನಲ್ಲಿ ಸಿಡಿಸಿದ ಅದೊಂದು ಸಿಕ್ಸರ್ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ವಾಸ್ತವವಾಗಿ ರಿಷಬ್ ಪಂತ್ 99 ಎಸೆತಗಳಲ್ಲಿ 90 ರನ್ ಗಳಿಸಿ ಆಡುತ್ತಿದ್ದ ವೇಳೆ ಕಿವೀಸ್ ಅನುಭವಿ ವೇಗಿ ಟಿಮ್ ಸೌಥಿ ದಾಳಿಗಿಳಿದರು. ಈ ವೇಳೆ ಪಂತ್, ಓವರ್ನ ಮೂರನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ಗೆ ಬರೋಬ್ಬರಿ 107 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು. ಪಂತ್ ಪವರ್ ಹೇಗಿತ್ತೆಂದರೆ ಚೆಂಡು ಚಿನ್ನಸ್ವಾಮಿ ಕ್ರೀಡಾಂಗಣದ ಮೇಲ್ಛಾವಣಿಗೆ ಬಿದ್ದಿತ್ತು. ಪಂತ್ ಅವರ ಈ ಶಾಟ್ ನೋಡಿದ ಅಭಿಮಾನಿಗಳು ಒಂದೆಡೆ ಖುಷಿ ಪಟ್ಟರೆ ಇನ್ನೊಂದೆಡೆ ಕಿವೀಸ್ ಆಟಗಾರರು ಕೂಡ ಆಶ್ಚರ್ಯಚಕಿತರಾಗಿ ಪಂತ್ ಸಿಡಿಸಿದ ಬಿಗ್ ಸಿಕ್ಸರ್ ಅನ್ನು ನೋಡುತ್ತಾ ನಿಂತರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

