IND vs WI: ಕ್ಯಾಂಪ್ಬೆಲ್, ಹೋಪ್ ಶತಕ: ತಪ್ಪಿದ ಇನಿಂಗ್ಸ್ ಸೋಲು..!
India vs West Indies, 2nd Test: ಈ ಎರಡು ಭರ್ಜರಿ ಶತಕಗಳ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡದ ಸ್ಕೋರ್ 270 ರನ್ ದಾಟಿದೆ. ಇದರೊಂದಿಗೆ ವಿಂಡೀಸ್ ಪಡೆ ಇನಿಂಗ್ಸ್ ಸೋಲನ್ನು ತಪ್ಪಿಸಿಕೊಂಡಿದೆ. ಅಂದರೆ 270 ರನ್ಗಳ ಮುನ್ನಡೆಯೊಂದಿಗೆ ಫಾಲೋ ಆನ್ ಹೇರಿದ್ದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು 270 ರನ್ಗಳ ಒಳಗೆ ಆಲೌಟ್ ಮಾಡಿದ್ದರೆ ಇನಿಂಗ್ಸ್ ಗೆಲುವು ದಾಖಲಿಸಬಹುದಿತ್ತು.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಪ್ಬೆಲ್ ಹಾಗೂ ಶೈ ಹೋಪ್ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್ಗಳಿಸಿ ಡಿಕ್ಲೇರ್ ಘೋಷಿಸಿತ್ತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ ತಂಡವನ್ನು 248 ರನ್ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾಗಿದ್ದರು. ಅಲ್ಲದೆ 270 ರನ್ಗಳ ಮುನ್ನಡೆ ಪಡೆದ ಭಾರತ ತಂಡವು ವೆಸ್ಟ್ ಇಂಡೀಸ್ ಮೇಲೆ ಫಾಲೋ ಆನ್ ಹೇರಿತು.
ಅದರಂತೆ ಮೂರನೇ ದಿನದಾಟದಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಜಾನ್ ಕ್ಯಾಂಪ್ಬೆಲ್ 199 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 115 ರನ್ ಬಾರಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶೈ ಹೋಪ್ 214 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 103 ರನ್ ಗಳಿಸಿದರು.
ಈ ಎರಡು ಭರ್ಜರಿ ಶತಕಗಳ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡದ ಸ್ಕೋರ್ 270 ರನ್ ದಾಟಿದೆ. ಇದರೊಂದಿಗೆ ವಿಂಡೀಸ್ ಪಡೆ ಇನಿಂಗ್ಸ್ ಸೋಲನ್ನು ತಪ್ಪಿಸಿಕೊಂಡಿದೆ. ಅಂದರೆ 270 ರನ್ಗಳ ಮುನ್ನಡೆಯೊಂದಿಗೆ ಫಾಲೋ ಆನ್ ಹೇರಿದ್ದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು 270 ರನ್ಗಳ ಒಳಗೆ ಆಲೌಟ್ ಮಾಡಿದ್ದರೆ ಇನಿಂಗ್ಸ್ ಗೆಲುವು ದಾಖಲಿಸಬಹುದಿತ್ತು.
ಇದೀಗ 90 ಓವರ್ಗಳ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್ ಕಳೆದುಕೊಂಡು 297 ರನ್ ಕಲೆಹಾಕಿದೆ. ಈ ಮೂಲಕ ಈ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯಲು ಪಣತೊಟ್ಟಿದ್ದಾರೆ.