Video: ಶಾಲಾ ನಾಟಕ, ಬುರ್ಖಾ ಧರಿಸಿದವರನ್ನು ಉಗ್ರರೆಂದು ಬಿಂಬಿಸಿದ ಮಕ್ಕಳು, ತೀವ್ರ ಆಕ್ರೋಶ
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಗುಜರಾತ್‌ನ ಶಾಲೆಯೊಂದರಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಬುರ್ಖಾ ಧರಿಸಿದವರನ್ನು ಉಗ್ರರು ಎಂದು ಕರೆದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುಜರಾತ್‌ನ ಭಾವನಗರ ಜಿಲ್ಲೆಯ ಕುಂಭಾರ್ವಾಡಾದಲ್ಲಿ ಈ ಘಟನೆ ನಡೆದಿದೆ. ಒಂದು ನಾಟಕದಲ್ಲಿ, ವಿದ್ಯಾರ್ಥಿನಿಯರು ಬುರ್ಖಾ ಧರಿಸಿದ್ದು ಅವರನ್ನು ಉಗ್ರರೆಂದು ಕರೆಯಲಾಗಿತ್ತು. ಈ ಘಟನೆಯನ್ನು ಇಸ್ಲಾಮೋಫೋಬಿಯಾ ಮತ್ತು ಕೋಮು ದ್ವೇಷವನ್ನು ಹರಡುವ ಪ್ರಯತ್ನ ಎಂದು ಕರೆಯಲಾಗಿದೆ.
ಅಹಮದಾಬಾದ್, ಆಗಸ್ಟ್ 19: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಗುಜರಾತ್‌ನ ಶಾಲೆಯೊಂದರಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಬುರ್ಖಾ ಧರಿಸಿದವರನ್ನು ಉಗ್ರರು ಎಂದು ಕರೆದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುಜರಾತ್‌ನ ಭಾವನಗರ ಜಿಲ್ಲೆಯ ಕುಂಭಾರ್ವಾಡಾದಲ್ಲಿ ಈ ಘಟನೆ ನಡೆದಿದೆ. ಒಂದು ನಾಟಕದಲ್ಲಿ, ವಿದ್ಯಾರ್ಥಿನಿಯರು ಬುರ್ಖಾ ಧರಿಸಿದ್ದು ಅವರನ್ನು ಉಗ್ರರೆಂದು ಕರೆಯಲಾಗಿತ್ತು. ಈ ಘಟನೆಯನ್ನು ಇಸ್ಲಾಮೋಫೋಬಿಯಾ ಮತ್ತು ಕೋಮು ದ್ವೇಷವನ್ನು ಹರಡುವ ಪ್ರಯತ್ನ ಎಂದು ಕರೆಯಲಾಗಿದೆ. ದೇಶದ ರಾಷ್ಟ್ರೀಯ ಹಬ್ಬದಂದು ಶಾಲೆಯ ಮೂಲಕ ಸಮಾಜವನ್ನು ವಿಭಜಿಸುವ ನಾಟಕವನ್ನು ಪ್ರಚಾರ ಮಾಡುವುದು ತಪ್ಪು ಎಂದು ಜನರು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

